Connect with us

Bengaluru City

ರಶ್ಮಿಕಾ ಅಭಿನಯದ ಟಾಪ್ ಟಕ್ಕರ್ ಸಾಂಗ್ ಟೀಸರ್ ಔಟ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಬಾದ್ ಷಾರ ಹೊಸ ಮ್ಯೂಸಿಕಲ್ ವೀಡಿಯೋ ಟಾಪ್ ಟಕ್ಕರ್ ಸಾಂಗ್‍ಗೆ ಸಾಥ್ ನೀಡಿದ್ದಾರೆ. ಇನ್ನೂ ಪೆಪ್ಪಿ ಡ್ಯಾನ್ಸ್ ನಂಬರ್ ಸಾಂಗ್ ಟೀಸರ್ ಫೆಬ್ರವರಿ 8 ರಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ರಶ್ಮಿಕಾ ಹೊಸ ಲುಕ್‍ನಲ್ಲಿ ಮಿಂಚಿದ್ದಾರೆ. ಅಲ್ಲದೆ ಇದು ರಶ್ಮಿಕಾರ ಮೊದಲ ಮ್ಯೂಸಿಕ್ ವೀಡಿಯೋ ಸಾಂಗ್ ಆಗಿದೆ.

ಈ ಸಾಂಗ್ ಟೀಸರ್‍ನಲ್ಲಿ ರಶ್ಮಿಕಾ ಸಂಪ್ರದಾಯಿಕ ಒಡವೆಗಳನ್ನು ಧರಿಸಿದ್ದು, ಅಭಿಮಾನಿಗಳು ರಶ್ಮಿಕಾ ಹೊಸ ಕಲರ್‍ಫುಲ್ ಲುಕ್‍ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸದ್ಯ ಟಾಪ್ ಟಕ್ಕರ್ ಸಾಂಗ್ ಟೀಸರ್‍ನನ್ನು ರಶ್ಮಿಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಟಾಪ್ ಟಾಪ್ ಟಾಪ್ ಟಕ್ಕರ್… ಮೊದಲ ಬಾರಿಗೆ ನಾನು ಈ ರೀತಿ ಅಭಿನಯಿಸಿದ್ದೇನೆ. ಆಯಾ ಇಂಡಸ್ಟ್ರಿಗಳಲ್ಲಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಕೂಡ ಬಹಳ ಕಾತುರದಿಂದ ಕಾಯುತ್ತಿದ್ದೇನೆ. ಆದಷ್ಟು ಶೀಘ್ರವೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಮತ್ತೊಂದರಲ್ಲಿ ನಾನು ಇದನ್ನು ಮದುವೆ ಸಮಾರಂಭಗಳಲ್ಲಿ, ಶಾಲಾ ಸಮಾರಂಭಗಳಲಲಿ, ಪಾರ್ಟಿಗಳಲ್ಲಿ ಎಲ್ಲೆಡೆ ಕೇಳುತ್ತೇನೆ ಎಂದು ನನಗೆ ತಿಳಿದಿದೆ. ನನ್ನನ್ನು ನಂಬಿ ನೀವು ಈ ಸಾಂಗ್‍ಗೆ ಡ್ಯಾನ್ಸ್ ಮಾಡುವ ಮೂಲಕ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುತ್ತೀರಿ ಎಂದು ಟ್ವೀಟ್ ಮಾಡಿದ್ದಾರೆ.

ಟಾಪ್ ಟಕ್ಕರ್ ಸಾಂಗ್ ನಲ್ಲಿ ಬಾದ್ ಷಾ, ಯುವನ್ ಶಂಕರ್ ರಾಜ್ ಮತ್ತು ಅಮಿತ್ ಉಚನಾ ಕಾಣಿಸಿಕೊಂಡಿದ್ದು, ಈ ಹಾಡಿಗೆ ಬಾದ್ ಷಾ ಹಾಗೂ ಯುವನ್ ಶಂಕರ್ ರಾಜ್ ಸಂಗೀತಾ ಸಂಯೋಜಿಸಿದ್ದಾರೆ. ಬಾದ್ ಷಾ ಹಾಗೂ ವಿಘ್ನೇಶ್ ಶಿವನ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಚಿತ್ರೀಕರಣಕ್ಕಾಗಿ ರಶ್ಮಿಕಾ ಕೆಲವು ತಿಂಗಳ ಹಿಂದೆ ಪಂಜಾಬ್‍ಗೆ ಹಾರಿದ್ದರು.

ಇದೀಗ ರಶ್ಮಿಕಾ ಟಾಲಿವುಡ್ ನಟ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾಲಿವುಡ್ ನಟ ಕಾರ್ತಿಕ್‍ರ ಸುಲ್ತಾನ್ ಸಿನಿಮಾದಲ್ಲಿ ಕೂಡ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ರಶ್ಮಿಕಾ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Click to comment

Leave a Reply

Your email address will not be published. Required fields are marked *