Thursday, 12th December 2019

Recent News

ಮಾಲ್ಡೀವ್ಸ್ ನಲ್ಲಿ ಡಿಪ್-ವೀರ್ ನ್ಯೂ ಇಯರ್-ಅಂದೇ ಉಂಗುರ ಬದಲಾಯಿಸಿಕೊಳ್ತಾರಾ?!

ಮುಂಬೈ: ಇತ್ತೀಚೆಗೆ ಅನುಷ್ಕಾ ಶರ್ಮಾ ತಮ್ಮ ಬಹು ದಿನಗಳ ಗೆಳೆಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮದುವೆಯಾಗಯವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಾಲಿವುಡ್‍ನ ಮತ್ತೊಂದು ರೊಮ್ಯಾಂಟಿಕ್ ಕಪಲ್ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (ಡಿಪ್‍ವೀರ್) ಹೊಸ ವರ್ಷದ ಆಚರಣೆಯಂದು ಪರಸ್ಪರ ಉಂಗುರ ಬದಲಾಯಿಸಿಕೊಳ್ತಾರೆ ಅಂತಾ ಸುದ್ದಿಯೊಂದು ಹರಿದಾಡುತ್ತಿದೆ.

2013ರಿಂದ ಪ್ರೇಮ ಪಾಶದಲ್ಲಿ ಸಿಲುಕಿರುವ ಡಿಪ್‍ವೀರ್ ಮಾಲ್ಡೀವ್ಸ್ ನಲ್ಲಿ ಈಗಾಗಲೇ ಖಾಸಗಿ ಬೀಚ್‍ವುಳ್ಳ ರೆಸಾರ್ಟ್ ಬುಕ್ ಮಾಡಿದ್ದು, ಅಲ್ಲಿಯೇ ಹೊಸ ವರ್ಷ ಆಚರಿಸುವುದರ ಜೊತೆಗೆ ಪರಸ್ಪರ ಉಂಗುರವನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣ್‍ವೀರ್ ಇದೂವರೆಗೂ ಬಹಿರಂಗವಾಗಿ ಎಲ್ಲಿಯೂ ತಮ್ಮ ಪ್ರೀತಿಯನ್ನು ಹೇಳಿಕೊಂಡಿಲ್ಲ. ಇಬ್ಬರೂ ಸ್ಟಾರ್‍ಗಳು ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಆಗಮಿಸುವುದು, ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮೆಸೇಜ್ ಗಳ ಮೂಲಕ ಲವ್ ಬಗ್ಗೆ ಸುಳಿವನ್ನು ನೀಡಿದ್ದಾರೆ.

ರಣ್‍ವೀರ್ ಮತ್ತು ದೀಪಿಕಾ ಪಡುಕೋಣೆ ಐತಿಹಾಸಿಕ ಕಥಾನಕವುಳ್ಳ ‘ಪದ್ಮಾವತಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರು. ಚಿತ್ರಕ್ಕೆ ಸೆನ್ಸಾರ್ ನಿಂದ ಅನುಮತಿ ಸಿಗದ ಕಾರಣಕ್ಕೆ ಪದ್ಮಾವತಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಶೂಟಿಂಗ್ ಬ್ಯೂಸಿ ಶೆಡ್ಯೂಲ್ ನಿಂದ ರಿಲೀಫ್ ತೆಗೆದುಕೊಂಡಿರುವ ಸ್ಟಾರ್ ಗಳು ಮಾಲ್ಡೀವ್ಸ್ ನಲ್ಲಿ ನ್ಯೂ ಇಯರ್ ಆಚರಸಲಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂ ಕೀ ರಾಸಲೀಲಾ: ರಾಮ್‍ಲೀಲಾ’ ಸಿನಿಮಾದಿಂದ ಡಿಪ್‍ವೀರ್ ಜೊತೆಯಾಗಿ ನಟಿಸಿದ್ದರು. ನಂತರ ‘ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಒಂದಾದ ಈ ಜೋಡಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿತ್ತು. ಇನ್ನೂ ದೀಪಿಕಾ ನಟನೆಯ ‘ಫೈಂಡಿಂಗ್ ಫ್ಯಾನಿ’ ಚಿತ್ರದ ಒಂದು ಚಿಕ್ಕ ದೃಶ್ಯವೊಂದರಲ್ಲಿ ದೀಪಿಕಾಳ ಪತಿಯಾಗಿ ರಣ್‍ವೀರ್ ಬಣ್ಣ ಹಚ್ಚಿದ್ದರು. ಒಟ್ಟಾರೆಯಾಗಿ ಈ ಹಾಟ್ ಕಪಲ್ ಪದ್ಮಾವತಿ ಸಿನಿಮಾದಲ್ಲಿ ನಾಲ್ಕನೇ ಬಾರಿ ಜೊತೆಯಾಗಿದ್ದಾರೆ. ಆದ್ರೆ ಪದ್ಮಾವತಿ ಚಿತ್ರದಲ್ಲಿ ರಣ್‍ವೀರ್ ಮತ್ತು ದೀಪಿಕಾ ನಡುವೆ ಯಾವುದೇ ರೊಮ್ಯಾಂಟಿಕ್ ದೃಶ್ಯಗಳಿಲ್ಲ ಅಂತಾ ಚಿತ್ರತಂಡ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *