Advertisements

ಮಂಡ್ಯದಲ್ಲಿ ಜನ ಕಾಯ್ತಿದ್ರೂ ಬರಲಿಲ್ಲ ರಮ್ಯಾ ಮೇಡಂ – ದೆಹಲಿಯಲ್ಲಿ ಗೆಳೆಯರ ಜೊತೆ ಬರ್ತ್‍ಡೇ

ಮಂಡ್ಯ: ಮಾಜಿ ಸಂಸದೆ, ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಬುಧವಾರದಂದು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ರಮ್ಯಾ ಮಂಡ್ಯಕ್ಕೆ ಬರುತ್ತಾರೆಂದು ಸಾವಿರಾರು ಜನ ಕಾಯ್ತಿದ್ರು. ಆದ್ರೆ ಅವರಿಗೆ ನಿರಾಸೆಯಾಗಿದ್ದು, ದೆಹಲಿಯಲ್ಲಿ ದೋಸ್ತ್‍ಗಳ ಜೊತೆ ರಮ್ಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Advertisements

ದೆಹಲಿಯಲ್ಲಿ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ರಮ್ಯಾ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ದೆಹಲಿಯ ಹುಟ್ಟುಹಬ್ಬ ಆಚರಣೆಯ ಫೋಟೋಗಳು ಪಬ್ಲಿಕ್ ಟಿವಿಗೆ ಸಿಕ್ಕಿದೆ.

Advertisements

ಬುಧವಾರದಂದು ಮಂಡ್ಯದಲ್ಲಿ ಜನ ರಮ್ಯಾ ಗಾಗಿ ಪೂಜೆ, ಪುನಸ್ಕಾರ ಮಾಡಿಸಿದ್ರು. ರಮ್ಯಾ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು, ರಾಜಕೀಯ ಬೆಂಬಲಿಗರು ಬ್ಯಾನರ್ ಹಾಕಿ ಶುಭಾಶಯವನ್ನು ಕೋರಿದ್ರು. ಅಷ್ಟೇ ಅಲ್ಲದೇ ಅವರ ಭಾವಚಿತ್ರ ಇರುವ 2018 ನೇ ಇಸವಿಯ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಿದ್ರು.

Advertisements

ವಿದ್ಯಾನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಮ್ಯಾ ಅಭಿಮಾನಿ ರಾಜೀವ್ ಮತ್ತು ಸಂತೋಷ್ ಕ್ಯಾಲೆಂಡರ್ ಬಿಡುಗಡೆ ಮಾಡಿದ್ರು. ರಮ್ಯಾ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಿದ ವಿವಿಧ ಫೋಟೋಗಳನ್ನು ಹಾಕಿ ಕ್ಯಾಲೆಂಡರ್ ಅನಾವರಣ ಮಾಡಲಾಯ್ತು.

ರಮ್ಯಾ ಮಂಡ್ಯಕ್ಕೆ ಬರುತ್ತಾರೆ ಎಂದು ವೃದ್ಧರೊಬ್ಬರು ಮನೆ ಮುಂದೆ ಕಾದು ಕುಳಿತಿದ್ದರು. 65 ವರ್ಷದ ವಿಠ್ಠಲ್ ರಾವ್ ಸಹಾಯ ಯಾಚಿಸಿ ಮನೆ ಬಳಿ ಕಾದು ಕುಳಿತ್ತಿದ್ದು, ರಮ್ಯಾ ಬರಲ್ಲ ಎಂದು ತಿಳಿದ ಮೇಲೆ ವಾಪಸ್ಸಾದ್ರು.

Advertisements
Exit mobile version