Connect with us

ನಲಪಾಡ್‌ ಆಪ್ತನ ಕಾರಿನಲ್ಲಿ ಸಿಡಿ ಲೇಡಿ ಸಂಚಾರ

ನಲಪಾಡ್‌ ಆಪ್ತನ ಕಾರಿನಲ್ಲಿ ಸಿಡಿ ಲೇಡಿ ಸಂಚಾರ

ಬೆಂಗಳೂರು: ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಸಿಡಿ ಲೇಡಿ ಮಂಗಳವಾರ ಕಾಂಗ್ರೆಸ್‌ ಯುವ ಮುಖಂಡ ಮೊಹಮ್ಮದ್‌ ನಲಪಾಡ್‌ ಸ್ನೇಹಿತರೊಬ್ಬರು ರಕ್ಷಣೆ ನೀಡಿದ್ದಾರೆ.

ನಲಪಾಡ್‌ ಪ್ರಕರಣದಲ್ಲಿ ಆರೋಪಿಯಾಗಿರುವ ನಫಿ ಮಾಲೀಕತ್ವದ ಕಾರಿನಲ್ಲಿ ಸಿಡಿ ಲೇಡಿ ಸಂಚರಿಸಿದ್ದಾರೆ. ಆಡುಗೋಡಿಯ ಟೆಕ್ನಿಕಲ್‌ ಕೇಂದ್ರದಿಂದ ರಾತ್ರಿ ಅಜ್ಞಾತ ಸ್ಥಳಕ್ಕೆ ಸಿಡಿ ಲೇಡಿ ಸಂಚರಿಸಿದ್ದರು. ಈ ವೇಳೆ ನಫಿ ಮಾಲೀಕತ್ವದ ಟೊಯೊಟಾ ಫಾರ್ಚೂನರ್‌ ಕಾರಿನಲ್ಲಿ ತೆರಳಿದ್ದಾರೆ. ಕೆಎ 04 ಎಂಯು 9232 ಸಂಖ್ಯೆಯ ಫಾರ್ಚೂನರ್‌ ಕಾರು ನಫಿ ಮೊಹಮ್ಮದ್‌ ನಾಸೀರ್‌ ಹೆಸರಿನಲ್ಲಿದೆ. 2018ರ ಜೂನ್‌ 12 ರಂದು ಈ ಕಾರು ನೋಂದಣಿಯಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ ಕಾಂಗ್ರೆಸ್‌ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ಈಗ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ನಿನ್ನೆ ಟ್ವೀಟ್‌ ಮಾಡಿದ್ದ ಬಿಜೆಪಿ ಕರ್ನಾಟಕ ಸಿಡಿ ಪ್ರಕರಣ ಕೆಪಿಸಿಸಿ ಪ್ರಾಯೋಜಿತ ಎಂದು ಸಾಬೀತಾಗುತ್ತಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ?ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ ಎಂದು ಪ್ರಶ್ನಿಸಿತ್ತು.

ಇನ್ನೊಂದು ಟ್ವೀಟ್‌ ನಲ್ಲಿ ಮಹಾನಾಯಕ, ಮಹಾನಾಯಕಿ, ಮಾಸ್ಟರ್ ಮೈಂಡ್, ಕೆಪಿಸಿಸಿ ಕಾನೂನು ಘಟಕದ ಸದಸ್ಯ. ಜಾಯಿನ್ ದ ಡಾಟ್ಸ್. ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಾಯೋಜಿತವೇ ಎಂದು ಪ್ರಶ್ನಿಸಿತ್ತು.

ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಮಸ್ಯೆ ಕೇಳಿಕೊಂಡು ಬಂದವರಿಗೆ ನೆರವಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ವಿಡಿಯೋ ಮಾಡಿ ಕಷ್ಟವನ್ನು ತೋಡಿಕೊಂಡಿದ್ದರು ಎಂದು ಹೇಳಿದ್ದರು.

Advertisement
Advertisement