Connect with us

Bengaluru City

ಜಾರಕಿಹೊಳಿ ಖಾತೆ ಮೇಲೆ ಪ್ರಭಾವಿ ಸಚಿವರ ಕಣ್ಣು

Published

on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಪ್ರಭಾವಿ ಸಚಿವರೊಬ್ಬರು ಕಣ್ಣಿಟ್ಟಿದ್ದು, ಲಾಬಿಗೆ ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಲಸಂಪನ್ಮೂಲ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯರ ಮೂಲಕ ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನನಗೆ ಖಾತೆ ಬದಲಾವಣೆ ಮಾಡಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನನಗೇನೂ ಗೊತ್ತಿಲ್ಲ, ತುಂಬಾ ದುಃಖದಲ್ಲಿದ್ದೇನೆ: ರಮೇಶ್ ಜಾರಕಿಹೊಳಿ ಕಣ್ಣೀರು 

ಈ ಹಿಂದೆ ನಾನು ಕೇಳಿದ ಖಾತೆ ನೀಡಲಿಲ್ಲ. ಸಂಪುಟ ಪುನಾರಚನೆ ವೇಳೆಯೂ ಬಯಸಿದ ಖಾತೆ ಸಿಗಲಿಲ್ಲ. ಈಗಲಾದ್ರೂ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ನೀಡಿ ಎಂದು ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಷಡ್ಯಂತ್ರ ಮಾಡಿದವ್ರು ಬೆಂಗಳೂರಿನಲ್ಲಿದ್ದಾರೆ: ರಮೇಶ್ ಜಾರಕಿಹೊಳಿ

Click to comment

Leave a Reply

Your email address will not be published. Required fields are marked *