Connect with us

Bengaluru City

ಆ ಹೆಣ್ಣಿನಿಂದ ಸ್ತ್ರೀ ಕುಲಕ್ಕೆ ಅಪಮಾನ: ರೇಣುಕಾಚಾರ್ಯ

Published

on

ಬೆಂಗಳೂರು : ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋದಲ್ಲಿರುವ ಮಹಿಳೆಯಿಂದ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಬಂಧಿಸಿ ಒಳಗೆ ಹಾಕಿ ರುಬ್ಬಿ: ದೂರು ಸಲ್ಲಿಸಿರುವ ದಿನೇಶ್ ಕಲ್ಲಹಳ್ಳಿಯನ್ನ ಬಂದಿಸುವಂತೆ ಸಿಎಂ ಮತ್ತು ಗೃಹ ಸಚಿವರ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದೊಂದು ಸಿಬಿಐಗೆ ನೀಡುವಂತೆ ಪ್ರಕರಣ ಇದಾಗಿದೆ. ದೂರು ಕೊಟ್ಟ ವ್ಯಕ್ತಿಗೂ ಮತ್ತು ಮಹಿಳೆಗೆ ಏನು ಸಂಬಂಧ? ಪ್ರಕರಣದ ಹಿಂದೆ ದುಡ್ಡು ಚೆಲ್ಲುತ್ತಿರೋರ ಬಗ್ಗೆ ತಿಳಿಯಬೇಕಿದೆ. ಆ ವ್ಯಕ್ತಿಗೆ ಸಿಡಿ ಮಾಡಲು ಪ್ರಚೋದನೆ ನೀಡಿದವರು ಯಾರು? ಬಂಧಿಸಿ ಒಳಗೆ ಹಾಕಿ ರುಬ್ಬಿದ್ರೆ ಸತ್ಯಾಂಶ ಹೊರ ಬರಬೇಕಿದೆ ಎಂದರು.

ಕಿರುಕುಳ ಅಥವಾ ರೇಪ್ ಅಲ್ಲ: ವೀಡಿಯೋದಲ್ಲಿ ಸಂಭಾಷಣೆ ಗಮನಿಸಿದ್ರೆ ಇದು ಲೈಂಗಿಕ ಕಿರುಕುಳ ಅಥವಾ ರೇಪ್ ಅಲ್ಲ. ಇಬ್ಬರ ನಡುವಿನ ಖಾಸಗಿ ಬದುಕು. ಅದನ್ನ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡಲಾಗಿದೆ. ರಾಜಕಾರಣಿಗಳ ವೀಕ್‍ನೆಸ್ ಗಳನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳಿಗೆ ಕೊನೆ ಆಗಬೇಕಾದ್ರೆ ದೂರು ನೀಡಿದ ವ್ಯಕ್ತಿಯನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ತ್ರೀ ಕುಲಕ್ಕೆ ಅವಮಾನ: ಮಹಿಳೆಯನ್ನ ನೋಡಿದ್ರೆ ಉದ್ದೇಶಪೂರ್ವಕವಾಗಿ ವೀಡಿಯೋ ಮಾಡಿರೋದು ಗೊತ್ತಾಗುತ್ತೆ. ನಮ್ಮನ್ನ ಹತ್ತವಳು ತಾಯಿ, ಭಾರತ ಮತ್ತು ಭೂಮಿಯನ್ನ ಅಮ್ಮನಿಗೆ ಹೋಲಿಸುತ್ತೇವೆ. ಆದ್ರೆ ಈ ಮಹಿಳೆ ಇಡೀ ಸ್ತ್ರೀ ಕುಲವನ್ನ ಅವಮಾನಿಸಿದ್ದಾಳೆ.

Click to comment

Leave a Reply

Your email address will not be published. Required fields are marked *