Bengaluru City
ನಟ ರಮೇಶ್ ಪುತ್ರಿಯ ಆರತಕ್ಷತೆ ಸಮಾರಂಭ – ರಾಜಕೀಯ, ಚಿತ್ರರಂಗದ ಗಣ್ಯರು ಭಾಗಿ

ಬೆಂಗಳೂರು: ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು.
ಡಿಸೆಂಬರ್ 28 ರಂದು ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈಹಿಡಿದಿದ್ದರು. ಕೊರೊನಾ ಹಿನ್ನಲೆ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸೇರಿ ಸರಳವಾಗಿ ಮದುವೆ ಸಮಾರಂಭ ನಡೆದಿತ್ತು. ಇಂದು ಖಾಸಗಿ ಹೋಟೆಲಿನಲ್ಲಿ ಆರತಕ್ಷತೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರಾದ ಶಿವರಾಜ್ ಕುಮಾರ್,ಯಶ್, ರಾಘವೇಂದ್ರ ರಾಜ್ ಕುಮಾರ್, ರವಿಚಂದ್ರನ್, ಶ್ರೀಮುರಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಆರೋಗ್ಯ ಸಚಿವ ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇನ್ನಿತರರು ಭಾಗವಹಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.
ಸಿನಿಮಾ ಕ್ಷೇತ್ರವಲ್ಲದೆ ಇರುವ ಅಕ್ಷಯ್ ನಿಹಾರಿಕ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಒಬ್ಬರಿಗೊಬ್ಬರು ಒಪ್ಪಿದ ನಂತರ ಎರಡು ಕುಟುಂಬದವರು ಸೇರಿ ವಿವಾಹ ಮಾಡಿದ್ದರು.
