Thursday, 17th January 2019

Recent News

ನಳಿನ್‍ಕುಮಾರ್ ಶವ ಸಂಸ್ಕಾರ ನಡೆಸೋದು ಮಾತ್ರ ಬಾಕಿಯಿದೆ: ರಮಾನಾಥ ರೈ

ಮಂಗಳೂರು: ಸಂಸದ ನಳಿನ್‍ಕುಮಾರ್ ಕಟೀಲ್ ಶವ ಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಎಂದು ಮಾಜಿ ಸಚಿವ ರಮಾನಾಥ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೋಟ್ ಬ್ಯಾನ್ ಆಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾ ಕಚೇರಿ ಎದುರಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ಮಾಜಿ ಸಚಿವರು, ಲಾಭದಲ್ಲಿರುವ ವಿಜಯ ಬ್ಯಾಂಕ್ ಜೊತೆಗೆ ನಷ್ಟದಲ್ಲಿರುವ ದೇನಾ ಬ್ಯಾಂಕನ್ನು ವಿಲೀನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಖಂಡನೀಯ ಎಂದು ಹರಿಹಾಯ್ದರು.

ವಿಜಯ್ ಬ್ಯಾಂಕನ್ನು ನಮ್ಮ ಸಮುದಾಯದ ನಾಯಕರು ಸ್ಥಾಪಿಸಿ ಬೆಳೆಸಿದರು. ಅದು ರಾಷ್ಟ್ರೀಕೃತಗೊಂಡು ಲಾಭದಾಯಕ ಬ್ಯಾಂಕ್ ಆಗುತ್ತಿದೆ. ಆದರೆ ಈಗ ಅದರೊಂದಿಗೆ ನಷ್ಟದಲ್ಲಿರುವ ದೇನಾ ಬ್ಯಾಂಕ್ ವಿಲೀನಗೊಳಿಸಲಾಗುತ್ತಿದೆ. ಇದನ್ನು ತಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಿಜೆಪಿ ಶಾಸಕರು, ಸಂಸದರು ವಿಫಲರಾಗಿದ್ದಾರೆ. ಹೀಗಾಗಿ ಅವರು ಜೀವಂತ ಇದ್ದೂ ಸತ್ತ ಹಾಗೆ ಎಂದು ಗುಡುಗಿದರು.

ಬ್ಯಾಂಕ್ ವಿಲೀನ ತಪ್ಪಿಸಲು ಸಾಧ್ಯವಾಗದೇ ಇದ್ದರೆ ಈ ಭಾಗದ ಸಂಸದ ನಳಿನ್ ಕುಮಾರ್ ಕಟೀಲ್ ಸತ್ತಿದ್ದಾರೆಯೇ ಅಂತ ಪ್ರಶ್ನೆ ಮಾಡುತ್ತೇನೆ ಎಂದ ಮಾಜಿ ಸಚಿವರು, ಸಂಸದರ ಶವ ಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದರು.

ಲೋಕಪಾಲ್ ಜಾರಿಗೆ ತರುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಗುಜರಾತಿನಲ್ಲೇ ಲೋಕಾಯುಕ್ತರು ಇಲ್ಲ. ಬೇರೆ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಬೋಧನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

Leave a Reply

Your email address will not be published. Required fields are marked *