Thursday, 23rd January 2020

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಬೆಳಗಾಗುವಷ್ಟರಲ್ಲಿ ಆಲೆಮನೆ, ಟ್ರ್ಯಾಕ್ಟರ್, ಕಾರು ಭಸ್ಮ

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಲೆಮನೆ, ಟ್ರ್ಯಾಕ್ಟರ್ ಹಾಗೂ ಕಾರ್ ಸುಟ್ಟು ಭಸ್ಮವಾಗಿರುವ ಘಟನೆ ಯಳಂದೂರು ತಾಲೂಕಿನ ಅಂಬಳೆಯಲ್ಲಿ ನಡೆದಿದೆ.

ಗ್ರಾಮದ ಶಿವಕುಮಾರಸ್ವಾಮಿ ಎಂಬವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಲೆಮನೆ, ಆಲಮನೆಯೊಳಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಕಾರು ಸುಟ್ಟು ಕರಕಲಾಗಿದೆ. ಮಂಗಳವಾರ ಮಧ್ಯರಾತ್ರಿವರೆಗೂ ಜಮೀನಿಗೆ ನೀರು ಹಾಯಿಸಿ ಶಿವಕುಮಾರಸ್ವಾಮಿ ತೆರಳಿದ್ದರು. ಮುಂಜಾನೆ ಈ ಅವಘಡ ಆಗಿದೆ ಎನ್ನಲಾಗಿದೆ.

ಅಂದಾಜು 5 ಲಕ್ಷ ರೂ. ಮೌಲ್ಯದ ವಸ್ತುಗಳು ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಶಿವಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *