Connect with us

4 ದಿನಗಳಿಂದೆ ಕಾಣೆಯಾಗಿದ್ದ ಬಾಲಕ ಇಂದು ಹೊಳೆಯಲ್ಲಿ ಶವವಾಗಿ ಪತ್ತೆ

4 ದಿನಗಳಿಂದೆ ಕಾಣೆಯಾಗಿದ್ದ ಬಾಲಕ ಇಂದು ಹೊಳೆಯಲ್ಲಿ ಶವವಾಗಿ ಪತ್ತೆ

ರಾಮನಗರ: ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಇಂದು ಹೊಳೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರದ ಮೊಹಬೂಬ್ ನಗರದಲ್ಲಿ ನಡೆದಿದೆ.

ರಾಮನಗರದ ಸುಮೇರ್ ಖಾನ್, ಅಲ್ಮಜ್ ಬೇಗಂ ದಂಪತಿಯ ದತ್ತು ಪುತ್ರ ದಯಾನ್ ಖಾನ್ ಶವವಾಗಿ ಪತ್ತೆಯಾಗಿದ್ದಾನೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಬಲೂನ್ ತರಲು ಹೋಗಿದ್ದ ಬಾಲಕ ದಯಾನ್ ಖಾನ್ ಕಾಣೆಯಾಗಿದ್ದ. ಆದರೆ ಇಂದು ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿಯ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಬಾಲಕ ಕಾಣೆಯಾಗಿದ್ದ ಕುರಿತು ರಾಮನಗರ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲಿಸರು ಬಾಲಕಗಾಗಿ ಹುಡುಕಾಟ ನಡೆಸುತ್ತಿದ್ದ ಸಮಯದಲ್ಲಿ ಹೊಳೆಯಲ್ಲಿ ಆತನ ಶವ ಸಿಕ್ಕಿದೆ. ಈ ವೇಳೆ ಸ್ಥಳೀಯರ ಮಾಹಿತಿಯಂತೆ ಬಾಲಕನ ಸಂಬಂಧಿ ಮುಜಾಮಿಲ್ ಅಲ್ಲಿಗೆ ಬಂದು ಹೋಗಿದ್ದು, ಆತನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement