Connect with us

Districts

ಡಿಕೆಶಿ ಯಾಕೆ ಅವರ ಹೆಸರನ್ನ ಹೇಳ್ತಿದ್ದಾರೋ ನನಗೆ ಗೊತ್ತಿಲ್ಲ: ಹೆಚ್‍ಡಿಕೆ

Published

on

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯಾಕೆ ಅವರ ಹೆಸರನ್ನ ಹೇಳ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಯಾಕೆ ಅವರ ಹೆಸರನ್ನ ಹೇಳ್ತಿದ್ದಾರೋ ನನಗೆ ಗೊತ್ತಿಲ್ಲ. ಯಾರು ಹೇಳಿದ್ದಾರೆ ಅವರ ಹೆಸರನ್ನ, ರಮೇಶ್ ಜಾರಕಿಹೊಳಿ ಹೇಳಿದ್ದಾರಾ..? ಮಾಧ್ಯಮಗಳು ಸಹ ಅವರ ಹೆಸರನ್ನ ಹೇಳಿಲ್ಲ. ಆದರೂ ಅವರೇ ಯಾಕೆ ಅವರ ಹೆಸರನ್ನ ಹೇಳ್ತಿದ್ದಾರೆ ಅನ್ನೋದು ಯಕ್ಷ ಪ್ರಶ್ನೆ. ಡಿಕೆಶಿಯೇ ಈ ಬಗ್ಗೆ ಹೇಳಬೇಕಿದೆ ಎಂದರು.

ಸಿಡಿ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಾನಾಯಕ ಯಾರೆಂದು ನೋಡಲು ನಾನು ಕಾತುರನಾಗಿದ್ದೇನೆ. ಈ ಪ್ರಕರಣ ಸಾರ್ವಜನಿಕವಾಗಿ ನಗೆಪಾಟಲುಗೆ ದಾರಿಯಾಗಿದೆ. ಅಂತಿಮವಾಗಿ ಯಾರಿಗೆ ಸುತ್ತಿಹಾಕಿಕೊಳ್ಳಲಿದೆ ಎಂದು ನೋಡಲು ನಾನು ಕಾಯ್ತಿದ್ದೇನೆ. ನಾವು ಮತ್ತು ನಮ್ಮ ಕುಟುಂಬ ಇಂತಹ ವಿಚಾರಗಳನ್ನ ರಾಜಕೀಯವಾಗಿ ಬಳಕೆ ಮಾಡಿಲ್ಲ. ದೇವೇಗೌಡರ 60 ವರ್ಷದ ರಾಜಕೀಯದಲ್ಲಿ ಈ ರೀತಿಯ ರಾಜಕೀಯ ಮಾಡಿಲ್ಲ. ಇವು ವೈಯಕ್ತಿಕ ವಿಚಾರಗಳು, ಇಂತಹದರಿಂದ ಸಣ್ಣತನದ ರಾಜಕೀಯ ಸರಿಯಲ್ಲ ಎಂದರು.

ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿದ ಪರಿಣಾಮ ಜೆಡಿಎಸ್ ಗೆ ಹಿನ್ನಡೆಯಾಯ್ತು. ರಾಮನಗರ ಜಿಲ್ಲೆಯಲ್ಲಿಯೂ ಹಿನ್ನಡೆಯಾಗಿದೆ. ರಾಮನಗರದಲ್ಲಿ ನಾನು ನಮ್ಮ ತಂದೆ ಬಂದಾಗ ಕಾಂಗ್ರೆಸ್ಸಿನವರು ಮನೆ ಸೇರಿದ್ದರು. ರಾಮನಗರದ ನನ್ನ ಭದ್ರಕೋಟೆಯ ಫೌಂಡೇಶನ್ ನನ್ನೇ ಅಲುಗಾಡಿಸಲು ಪ್ರಾರಂಭ ಮಾಡಿದ್ದಾರೆ. ಚಿತ್ರದುರ್ಗಾದ ಮದಕರಿ ನಾಯಕನ ಕೋಟೆಗೆ ಹೈದರಾಲಿ ಸೈನಿಕರು ಕಿಂಡಿಯಲ್ಲಿ ನುಗ್ಗಿದ್ದರು. ಅದೇ ರೀತಿ ರಾಮನಗರದಲ್ಲಿ ಕಾಂಗ್ರೆಸ್ ನವರು ನನ್ನ ಕೋಟೆಗೆ ನುಗ್ಗಿದ್ದಾರೆ, ಅದು ಪ್ರಾರಂಭವಾಗಿದೆ. ಆದರೆ ನಾನು ಹೋರಾಟ ಮಾಡ್ತೇನೆ, ರಾಮನಗರದಲ್ಲಿ ನನಗೆ ಭಯವಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ರೈತರ ಸಾಲಮನ್ನಾ ಮಾಡಿದೆ. ರೈತರಿಗೆ ಕೊಟ್ಟ ಮಾತನ್ನ ನಾನು ಉಳಿಸಿಕೊಂಡಿದ್ದೇನೆ, ಆ ಸಮಾಧಾನವಿದೆ ಎಂದು ಟಾಂಗ್ ಕೊಟ್ಟರು.

ನನ್ನ ಪಕ್ಷದ ಯಾವ ಮುಖಂಡ, ಶಾಸಕರನ್ನ ಸೆಳೆದರೂ ಪರವಾಗಿಲ್ಲ. ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನ ಅಲುಗಾಡಿಸಲು ಸಾಧ್ಯವಿಲ್ಲ. ದೊಡ್ಡದೊಡ್ಡ ನಾಯಕರನ್ನ ಸೆಳೆಯಬಹುದು, ಆದರೆ ನಾಯರನ್ನ ಬೆಳೆಸೋರು ಕಾರ್ಯಕರ್ತರು. ಇನ್ನು ಎಷ್ಟೇ ಜನರು ಹೋದರು ಜೆಡಿಎಸ್ ಬಲವಾಗಿರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೆಸರು ಬಳಸದೇ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

Click to comment

Leave a Reply

Your email address will not be published. Required fields are marked *