`ಆರ್ಆರ್ಆರ್’ ಸಕ್ಸಸ್ ನಂತರ ರಾಮ್ಚರಣ್ ಸಿನಿಮಾ ಆಯ್ಕೆಯಲ್ಲಿ ಸಖತ್ ಸೆಲೆಕ್ಟೀವ್ ಆಗಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಪತ್ನಿ ಉಪಾಸನಾ ಜೊತೆ ಆಫ್ರಿಕಾದ ತಾಂಜಾನಿಯಾ ಕಾಡಿನಲ್ಲಿ ರಾಮ್ ಚರಣ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈಗ ಈ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜಮೌಳಿ ನಿರ್ದೇಶನದ `ಆರ್ಆರ್ಆರ್’ ಸಕ್ಸಸ್ ನಂತರ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಜೊತೆ ರಾಮ್ ಚರಣ್ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿರುವ ಪಕ್ಕಾ ಆ್ಯಕ್ಷನ್ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್ಗೆ ಬ್ರೇಕ್ ಹಾಕಿ, ಪತ್ನಿ ಜೊತೆ ತಾಂಜಾನಿಯಾ ಕಾಡಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
ಚಿತ್ರರಂಗದ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ರಾಮ್ ಚರಣ್ ಮತ್ತು ಉಪಾಸನಾ ಆಗಾಗ ವೇಕೇಷನ್ಸ್ ದೂರದ ವಿದೇಶಕ್ಕೆ ಸುಂದರ ತಾಣಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಈಗ ತಾಂಜಾನಿಯಾ ಕಾಡಿಗೆ ಪತ್ನಿ ಜೊತೆ ರಾಮ್ ಚರಣ್ ತೆರಳಿದ್ದಾರೆ.
ತಾಂಜಾನಿಯಾ ಕಾಡಿಗೆ ಬಂದಿರುವ ರಾಮ್ ಚರಣ್ ದಂಪತಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.