Connect with us

ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಸಿಗ್ತಾರೆ: ಕ್ರೇಜಿ ಕ್ವೀನ್‍ಗೆ ಸಾರಥಿಯ ವಿಶ್

ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಸಿಗ್ತಾರೆ: ಕ್ರೇಜಿ ಕ್ವೀನ್‍ಗೆ ಸಾರಥಿಯ ವಿಶ್

ಬೆಂಗಳೂರು: ಚಂದನವನದ ಕ್ರೇಜಿ ಕ್ವೀನ್, ಸುಂಟರಗಾಳಿ ನಟಿ ರಕ್ಷಿತಾ ಪ್ರೇಮ್ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ತಮ್ಮ ಆಪ್ತ ಸ್ನೇಹಿತೆಯಾಗಿರುವ ರಕ್ಷಿತಾ ಪ್ರೇಮ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ದರ್ಶನ್ ಟ್ವೀಟ್: ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್ ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

ಸ್ಕ್ರೀನ್ ಮೇಲೆ ದರ್ಶನ್ ಮತ್ತು ರಕ್ಷಿತಾ ಜೋಡಿ ಮಾಡಿದ ಮೋಡಿ ಹಚ್ಚಹಸಿರಾಗಿದೆ. ಕಲಾಸಿಪಾಳ್ಯ ಬಳಿಕ ದರ್ಶನ್‍ಗೆ ನಾಯಕಿ ರಕ್ಷಿತಾ ಇರಬೇಕೆಂದು ಪ್ರತಿಯೊಬ್ಬರು ಇಷ್ಟಪಡುತ್ತಿದ್ದರು. ದರ್ಶನ್ ಮತ್ತು ರಕ್ಷಿತಾ ಜೋಡಿಯನ್ನೇ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಥಿಯೇಟರ್ ನತ್ತ ಆಗಮಿಸುತ್ತಿದ್ದರು.

ಸಿನಿಮಾ ಹೊರತಾಗಿ ರಕ್ಷಿತಾ ಮತ್ತು ದರ್ಶನ್ ಒಳ್ಳೆಯ ಸ್ನೇಹಿತರು ಅನ್ನೋದು ಜಗಜ್ಜಾಹೀರು. ಇನ್ನು ರಕ್ಷಿತಾ ಪ್ರೇಮ್ ಅವಕಾಶ ಸಿಕ್ಕಾಗೆಲ್ಲಾ ದರ್ಶನ್ ಸರಳತೆ, ಕಷ್ಟಕ್ಕೆ ಮಿಡಿಯುವ ಹೃದಯ, ಮಾಸ್ ಹೀರೋನ ಒಳಗಿರುವ ಹೆಂಗರಳು ಹೀಗೆ ಯಜಮಾನನ ಗುಣಗಾನ ಮಾಡುತ್ತಿರುತ್ತಾರೆ. ಸದ್ಯ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್, ಮುದ್ದಾಗಿ ಡ್ಯಾನ್ಸ್ ಮಾಡಿದ ಮಕ್ಕಳಿಗೆ ದರ್ಶನ್ ಜೊತೆ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದರು.

ರಮ್ಯಾ ವಿಶ್: ರಕ್ಷಿತಾ ಪ್ರೇಮ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ರಕ್ಷಿತಾಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಇಲ್ಲದೇ ನನ್ನ ಸಿನಿಮಾ ಪ್ರಯಾಣ ಅಪೂರ್ಣ. ಆ ದಿನಗಳೇ ತುಂಬಾ ಸುಂದರ. ಇಂದು ಮತ್ತು ಯಾವಾಗಲೂ ಎಲ್ಲರ ಪ್ರೀತಿಗೆ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ. ಈ ದಿನ ಮತ್ತಷ್ಟು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ. ಇಬ್ಬರು ಜೊತೆಯಾಗಿ ಕುಳಿತು ಕ್ಲಿಕ್ಕಿಸಿಕೊಂಡಿರುವ ಹಳೆಯ ಫೋಟೋವನ್ನ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.

Advertisement
Advertisement