Connect with us

Cinema

ರಾಖಿ ತಾಯಿಗೆ ಕ್ಯಾನ್ಸರ್ – ವೀಡಿಯೋ ಮೂಲಕ ಸಲ್ಮಾನ್ ಖಾನ್, ಸೋದರನಿಗೆ ಥ್ಯಾಂಕ್ಸ್

Published

on

ಮುಂಬೈ: ನಟಿ, ಬಿಗ್ ಬಾಸ್-14ರ ಸ್ಪರ್ಧಿ ರಾಖಿ ಸಾವಂತ್ ತಾಯಿ ಜಯಾ ಸಾವಂತ್ ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇದೀಗ ಆಪರೇಷನ್‍ಗೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಅವರು ವೀಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚೆಗೆ ನಟಿ ರಾಖಿ ಸಾವಂತ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದ್ದು, ಕೆಲ ಕಾಲ ಅಮ್ಮನೊಂದಿಗೆ ಕಾಲ ಕಳೆದಿದ್ದಾರೆ. ಈ ವೇಳೆ ವಿಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಸಹಾಯ ಮಾಡಿದ್ದಕ್ಕೆ ವೀಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.

 

View this post on Instagram

 

A post shared by Rakhi Sawant (@rakhisawant2511)

ಸೊಹೈಲ್ ಖಾನ್ ಸಹ ಈ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಾಖಿ ಮೈ ಡಿಯರ್, ನಿಮ್ಮ ತಾಯಿಗೆ ಏನೇ ಬೇಕಾದರೂ ಯಾವುದೇ ಸಮಯದಲ್ಲಿ ನೀವು ನೇರವಾಗಿ ನನಗೆ ಕರೆ ಮಾಡಬಹುದು. ನನಗೆ ನಿಮ್ಮ ತಾಯಿ ಬಗ್ಗೆ ಗೊತ್ತಿಲ್ಲ, ಆದರೆ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನೀನು ತುಂಬಾ ಸ್ಟ್ರಾಂಗ್, ಅಲ್ಲದೆ ಅವರ ಮಗಳು. ಅಂದರೆ ನಿನಗಿಂತ ನಿಮ್ಮ ತಾಯಿ ಹೆಚ್ಚು ಸ್ಟ್ರಾಂಗ್ ಆಗಿರ್ತಾರೆ. ಬೇಗನೇ ಅವರು ಗುಣಮುಖರಾಗಲೆಂದು ನಾನು ಪ್ರಾರ್ಥಿಸುತ್ತೇನೆ. ಒಬ್ಬ ಮಗಳಾಗಿ ಸ್ಥಳದಲ್ಲಿದ್ದು ಎಲ್ಲವನ್ನೂ ಮಾಡುತ್ತಿದ್ದೀಯಾ. ನಿನಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೇರವಾಗಿ ನನಗೆ ಕರೆ ಮಾಡು ಎಂದು ಮನವಿ ಮಾಡಿದ್ದಾರೆ.

 

View this post on Instagram

 

A post shared by yogen shah (@yogenshah_s)

ಇದಕ್ಕೆ ರಾಖಿ ತಾಯಿ ವೀಡಿಯೋ ಮೂಲಕ ಪ್ರತಿಕ್ರಿಯಿಸಿ, ಬೆಂಬಲ ಹಾಗೂ ಸಹಾಯಕ್ಕಾಗಿ ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಅವರಿಗೆ ಧನ್ಯವಾದಗಳು. ಸದ್ಯ ಕೀಮೋಥೆರಪಿ ಮಾಡಲಾಗುತ್ತಿದೆ. ಇಂದಿಗೆ 4 ಕೀಮೋಥೆರಪಿ ಆಗಿವೆ ಇನ್ನೂ 2 ಬಾಕಿ ಇವೆ. ಬಳಿಕ ಆಪರೇಷನ್ ಮಾಡಲಾಗುತ್ತದೆ. ಥ್ಯಾಂಕ್ಯೂ, ದೇವರು ನಿಮ್ಮ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಈ ಬಗ್ಗೆ ಮತ್ತೊಂದು ವೀಡಿಯೋದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಖಿ ಸಾವಂತ್, ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸಲು ನನ್ನ ತಾಯಿ ವೀಡಿಯೋ ಮಾಡಿದ್ದರು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೀಮೋಥೆರಪಿ ಮಾಡಲಾಗುತ್ತಿದೆ. ಕೀಮೊ ಮಾಡುತ್ತಿರುವುದರಿಂದ ಹೊಟ್ಟೆ ನೋವು, ವಾಂತಿ ಶುರುವಾಗಿದೆ. ಇದೆಲ್ಲದರ ಮಧ್ಯೆಯೂ ನಗುತ್ತಲೇ ವೀಡಿಯೋ ಮಾಡಿದ್ದಾಳೆ. ಬಿಗ್ ಬಾಸ್-14ರಿಂದ ಹೊರ ಬಂದ ಬಳಿಕ ನನಗೆ ಇದು ದೊಡ್ಡ ಶಾಕ್. ಕೀಮೋ ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ, ನಮ್ಮ ತಾಯಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ರಾಖಿ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ನನ್ನ ತಾಯಿಯನ್ನು ಉಳಿಸಿಕೊಳ್ಳಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ 14 ಲಕ್ಷ ರೂ. ಸಿಕ್ಕಿದೆ. ಇದನ್ನೂ ಅವಳ ಚಿಕಿತ್ಸೆಗೆ ಬಳಸುತ್ತೇನೆ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *