Sunday, 15th December 2019

ಮದ್ವೆಯಾಗಿ ಮೂರು ತಿಂಗ್ಳ ನಂತ್ರ ಮಗ್ಳನ್ನು ಪರಿಚಯಿಸಿದ ರಾಖಿ: ವಿಡಿಯೋ

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಮೂರು ತಿಂಗಳ ನಂತರ ಮಗಳನ್ನು ಪರಿಚಯಿಸಿದ್ದಾಳೆ. ರಾಖಿ ಮಗಳ ವಿಡಿಯೋ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ರಾಖಿ ತನ್ನ ಇನ್‍ಸ್ಟಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬಾಲಕಿಯೊಬ್ಬಳು ರಾಖಿ ನನ್ನ ತಾಯಿ ಎಂದು ಹೇಳಿದ್ದಾಳೆ. ರಾಖಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಸ್ನೇಹಿತರೇ, ಅಭಿಮಾನಿಗಳೇ, ಇವಳು ನನ್ನ ಮಗಳು. ದಯವಿಟ್ಟು ಎಲ್ಲರೂ ಇವಳಿಗೆ ಆಶೀರ್ವಾದ ಮಾಡಿ” ಎಂದು ಬರೆದುಕೊಂಡಿದ್ದಾಳೆ.

ಈ ವಿಡಿಯೋ ನೋಡಿ ಒಬ್ಬರು ರಾಖಿ ನೀನು ಯಾವ ಆ್ಯಪ್ ಬಳಸಿ ನಿನ್ನ ಫೋಟೋವನ್ನು ಮಗುವಿನ ಫೋಟೋವನ್ನಾಗಿ ಮಾಡುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ರಾಖಿಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ಮೊದಲು ರಾಖಿ ತಾನು ಗರ್ಭಿಣಿ ಎಂದು ವಿಡಿಯೋವೊಂದರಲ್ಲಿ ಹೇಳಿದ್ದಳು. ಇದು ಫನ್ನಿ ವಿಡಿಯೋ ಆಗಿದ್ದು, ರಾಖಿ, “ಜಾನು ನಾನು ತಾಯಿ ಆಗುತ್ತಿದ್ದೇನೆ” ಎಂದು ಹೇಳಿದ್ದಾಳೆ. ಇದೇ ವೇಳೆ “ಇದು ಹೇಗೆ ಸಾಧ್ಯ ನಾನು ಲಂಡನ್‍ನಲ್ಲಿ ಇದ್ದೇನೆ” ಎಂದು ಮತ್ತೊಂದು ಧ್ವನಿ(ಅಂದರೆ ಆಕೆಯ ಪತಿಯ ಧ್ವನಿ ಕೇಳಿಸುತ್ತದೆ) ವಿಡಿಯೋದಲ್ಲಿ ಕೇಳಿಸುತ್ತದೆ.

ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾಳೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

Leave a Reply

Your email address will not be published. Required fields are marked *