Connect with us

Crime

ಹಾಡಹಗಲೇ ನಡುರಸ್ತೆಯಲ್ಲಿ ಸಹೋದರಿಯನ್ನು 10 ಬಾರಿ ಇರಿದು ಕೊಂದ..!

Published

on

– ಕೊಲೆಗೈದು ಯಾರಿಗೂ ಹೆದರಲ್ಲ ಎಂದ ಆರೋಪಿ
– ಸ್ಥಳದಲ್ಲೇ ಇದ್ದು ಪೊಲೀಸರಿಗೆ ಶರಣಾದ

ಗಾಂಧಿನಗರ: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಸಹೋದರ 8-10 ಬಾರಿ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ರಾಜ್‍ಕೋಟ್ ನ ಮುಂದ್ರಾ ಪಟ್ಟಣದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿರುವ ಮಹಿಳೆಯೊಬ್ಬರು ಆಕೆಯ ಮನೆ ಮುಂದೆ ಜೋರಾಗಿ ಕಿರುಚಾಡುತ್ತಿರುವುದನ್ನು ಸ್ಥಳೀಯ ನಿವಾಸಿಗಳು ನೋಡಿದ್ದಾರೆ. ಆಕೆಯ ಬಟ್ಟೆ ರಕ್ತಸಿಕ್ತವಾಗಿತ್ತು. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತ ನೆರೆಹೊರೆಯವರಿಗೆ ಆಘಾತವೂ ಆಗಿದೆ.

ಸಾರ್ವಜನಿಕರ ಮುಂದೆಯೇ ಸಹೋದರ ಸಹೋದರಿಯ ಹಿಂದೆಯೇ ಓಡಿ ಆಕೆ ಸಾಯುವವರೆಗೆ ಅಂದರೆ ಸುಮಾರು 8-10 ಬಾರಿ ಚಾಕುವಿನಿಂದ ಇರಿದಿದ್ದಾನೆ.

22 ವರ್ಷದ ಸಹೋದರಿ ರೀನಾಳನ್ನು ಕೊಲೆ ಮಾಡಿದ ಬಳಿಕವೂ ಆರೋಪಿ ಪ್ರೇಮ್‍ಸಂಗ್ ಅಲ್ಲಿಂದ ಕದಲಿಲ್ಲ. ಸಹೋದರಿಯ ಶವದ ಸುತ್ತಮುತ್ತ ಓಡಾಡುತ್ತಿದ್ದನು. ಅಲ್ಲದೆ ನಾನು ನನ್ನ ಸಹೋದರಿಯನ್ನು ಕೊಲೆ ಮಾಡಿದ್ದೇನೆ. ಆದರೆ ನಾನು ಯಾರಿಗೂ ಹೆದರೋ ಮಗನಲ್ಲ ಎಂದು ಜೋರಾಗಿ ಕಿರುಚುತ್ತಾ ಆ ಕಡೆ ಈ ಕಡೆ ಓಡಾಡಿದ್ದಾನೆ.

ಈ ವೇಳೆ ಸ್ಥಳೀಯರು ಎಲ್ಲೂ ಹೋಗಬೇಡ ಪೊಲೀಸ್ ಬರೋವರೆಗೂ ಅಲ್ಲೇ ಇರು ಎಂದು ಹೇಳಿದ್ದಾರೆ. ಅದಕ್ಕೂ ಪ್ರೇಮ್‍ಸಂಗ್ ಒಪ್ಪಿಕೊಂಡಿದ್ದು, ಸ್ಥಳದಿಂದ ಎಲ್ಲೂ ಹೋಗಿಲ್ಲ. ಕೊನೆಗೆ ಪೊಲೀಸರ ಮುಂದೆ ಶರಣಾಗಿದ್ದಾನೆ.

ಪ್ರೇಮ್ ಸಂಗ್ ನನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ, ರೀನಾಳಿಗೆ ಬೇರೆಯೊಬ್ಬನ ಜೊತೆ ಸಂಬಂಧವಿತ್ತು ಎಂದು ತಿಳಿಸಿದ್ದಾನೆ. ಪ್ರೇಮ್ ಸಂಗ್ ತನ್ನ ಸಹೋದರಿಯನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೆಲ ವರ್ಷಗಳಿಂದ ರೀನಾ ಆಕೆಯ ಪತಿಯಿಂದ ದೂರವಾಗಿದ್ದಳು. ಆ ಬಳಿಕದಿಂದ ಆಕೆ ಮಾರುತಿ ನಗರದಲ್ಲಿ ಭವನ್ ಜೋಗಿ ಎಂಬಾತನೊಂದಿಗೆ ವಾಸವಾಗಿದ್ದಳು. 2014ರಲ್ಲಿ ರೀನಾಳ ತಂದೆಯನ್ನು ಜೋಗಿ ಕೊಲೆ ಮಾಡಿದ್ದು, ಖುಲಾಸೆಗೊಂಡಿದ್ದನು ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಹೋದರಿಯ ಗುಣನಡೆತೆಯ ಬಗ್ಗೆ ಇತರರು ಮಾತನಾಡುತ್ತಿಒರುವುದು ಪ್ರೇಮ್ ಸಿಂಗ್ ಕೋಪೋದ್ರಿಕ್ತನಾಗಲು ಕಾರಣವಾಗಿತ್ತು. ಇದೇ ಕಾರಣದಿಂದ ಪ್ರೇಮ್ ಸಿಂಗ್, ರೀನಾಳನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕೊಲೆಗೆ ಬಳಸಿದ್ದ ಮಾರಕಾಸ್ತ್ರದ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಕೊಲೆಗೆ ಯಾರಾದರೂ ಪ್ರೇರಣೆಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *