ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದಿಗೂ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಇಂದು ರಾಜೀವ್ ಗಾಂಧಿ ಅವರ 75 ನೇ ಹುಟ್ಟು ಹಬ್ಬದ ಪ್ರಯಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರು ಪೂರ್ಣ ಬಹುಮತದಲ್ಲಿ ಅಧಿಕಾರ ಪಡೆದಿದ್ದರು. ಆದರೆ ಅವರು ಅಧಿಕಾರವನ್ನು ಉಪಯೋಗಿಸಿಕೊಂಡು ಯಾವತ್ತು ಜನರರಲ್ಲಿ ಭಯವನ್ನು ತರಿಸುವ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಕೆ.ಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಹೆಸರನ್ನು ಉಪಯೋಗಿಸದೆ ಕಮಲ ಪಾಳಯಕ್ಕೆ ಟಾಂಗ್ ಕೊಟ್ಟ ಸೋನಿಯಾ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಅಧಿಕಾರವನ್ನು ಉಪಯೋಗಿಸಿಕೊಂಡು ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಮತ್ತು ಅವರನ್ನು ಭಯದ ವಾತಾವರಣದಲ್ಲಿ ಇಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
Advertisement
ಕಾಂಗ್ರೆಸ್ ಪಕ್ಷ ಎದ್ದು ನಿಂತು ಭಾರತೀಯ ಮೌಲ್ಯಗಳನ್ನು ನಾಶಮಾಡುತ್ತಿರುವ ಶಕ್ತಿಗಳ ವಿರುದ್ಧ ಹೋರಾಡಬೇಕು. ವಿಭಜನೆಯ ಶಕ್ತಿಗಳು ಮತ್ತು ಭಾರತದ ಕಲ್ಪನೆಯನ್ನು ಬದಲಾಯಿಸಲು ಬಯಸುವವರ ವಿರುದ್ಧ ಪಕ್ಷವು ತನ್ನ ಹೋರಾಟವನ್ನು ಮುಂದುವರಿಸಬೇಕು ಎಂದು ಹೇಳಿದ ಅವರು, ಈಗ ಪ್ರಧಾನ ಮಂತ್ರಿ ಹೇಳಿದಂತೆ ಭಾರತದ ವೈವಿಧ್ಯತೆಯನ್ನು ಆಚರಿಸುವ ಮೂಲಕ ಏಕತೆಯನ್ನು ಕಾಪಾಡಿಕೊಳ್ಳಬಹುದು ಎಂಬ ಸಂದೇಶವನ್ನು ರಾಜೀವ್ ಗಾಂಧಿ ಆಗಲೇ ನೀಡಿದರು ಎಂದು ಹೇಳಿದರು.
Advertisement
ಪ್ರಧಾನಿ ಮೋದಿಯವರ ಮೇಲೆ ಸೋನಿಯಾ ಗಾಂಧಿ ನಡೆಸಿದ ಪರೋಕ್ಷ ದಾಳಿಯ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷರು “ನಾಚಿಕೆಯಿಲ್ಲದೆ ಸುಳ್ಳು ಹೇಳುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ರಾಜೀವ್ ಗಾಂಧಿ ಎಂದಿಗೂ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಕಾಂಗ್ರೆಸ್ ಗೂಂಡಾಗಳೊಂದಿಗೆ 8,000 ಅಮಾಯಕ ಸಿಖ್ಖರನ್ನು ರಸ್ತೆಗಳಲ್ಲಿ ಜೀವಂತವಾಗಿ ಸುಟ್ಟುಹಾಕಲು ಕಾರಣವಾದ ಅದೇ ರಾಜೀವ್ ಗಾಂಧಿ!! ಜಬ್ ಎಕ್ ಬಡಾ ಪೇಡ್ ಗಿರ್ತಾ ಹೈ ತೋ ತೋ ಧರ್ತಿ ಹಿಲ್ತಿ ಹೈ.” ಎಂದು ಟ್ವೀಟ್ ಮಾಡಿದ್ದಾರೆ.
Sonia Gandhi is lying shamelessly
She says Rajiv Gandhi never created an envt of “FEAR”… That same Rajiv Gandhi who with his Congress goons caused 8000 innocent Sikhs to be burnt alive on roads!!
That same Rajiv Gandhi who said “जब एक बड़ा पेड़ गिरता है तो धरती हिलती है!” @ANI https://t.co/XK9QEXDFVs
— Manjinder Singh Sirsa (@mssirsa) August 22, 2019