Connect with us

Crime

ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

Published

on

ಜೈಪುರ: ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ 12 ನೇ ತರಗತಿಯ ಶಾಲಾ ಬಾಲಕಿಯ ಬ್ರೈನ್ ಡ್ಯಾಮೇಜ್ ಆಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಶಾಲೆಯ ಶಿಕ್ಷಕ ಜಗದೀಶ್ ಹಾಗೂ ನಿರ್ದೇಶಕ ಜಗತ್ ಸೇರಿ 18 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ಎಸಗಿ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು.

ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪೂರ್ವ ತಯಾರಿ ನಡೆಸಿದ್ದ ಆರೋಪಿಗಳು ಬಾಲಕಿ ಶಾಲೆಯಲ್ಲಿ ಉಳಿಯುವಂತೆ ಮಾಡಲು ಹೆಚ್ಚಿನ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿವೆ.

ಅತ್ಯಾಚಾರ ಮಾಡಿ ಯಾವುದೇ ಎಚ್ಚರಿಕೆ ವಹಿಸದೆ ಗರ್ಭಪಾತಕ್ಕೆ ಮಾಡಿಸಿದ್ದಾರೆ. ಇದರಿಂದ ಆಮ್ಲಜನಕದ ಕೊರತೆ ಉಂಟಾಗಿ ಶಾಶ್ವತ ಬ್ರೈನ್ ಡ್ಯಾಮೇಜ್ ಸಮಸ್ಯೆಯಾಗಿದೆ ಎಂದು ಜೈಪುರದ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಮೀನಾ ತಿಳಿಸಿದ್ದಾರೆ.

ಪ್ರಕರಣದ ನಂತರ ಜಿಲ್ಲಾ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವಂತೆ ಸೂಚಿಸಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿರುವುದಾಗಿ ಸಿಕಾರ್ ಜಿಲ್ಲಾ ಪೊಲೀಸ್ ಅಧಿಕಾರಿ ವಿನಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ಆರೋಗ್ಯದ ಪರಿಸ್ಥತಿಯಿಂದ ಆಕೆಯ ಹೇಳಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಗರ್ಭಪಾತ ಮಾಡಿದ ಕ್ಲಿನಿಕ್ ಮೇಲೆ ದಾಳಿ ನಡೆಸಿ ಆರೋಪಿಗಳಿಗೆ ಸಹಕಾರ ನೀಡಿದ್ದಕ್ಕೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಕ್ಲಿನಿಕ್ ಇದುವರೆಗೂ ಮಾಡಿರುವ ಎಲ್ಲಾ ಪ್ರಕರಣಗಳ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವಿನಿತ್ ಕುಮಾರ್ ತಿಳಿದರು.