Connect with us

Cricket

ಸ್ಯಾಮ್ಸನ್ 9 ಸಿಕ್ಸ್, ಕೊನೆಯ ಓವರಿನಲ್ಲಿ 30 ರನ್ – ಆರ್ಚರ್ ಅಬ್ಬರದಿಂದ ಚೆನ್ನೈಗೆ 217 ರನ್ ಟಾರ್ಗೆಟ್

Published

on

– ಚೆನ್ನೈ ಸ್ಪಿನ್ನರ್‌ಗಳನ್ನು ಮಕಾಡೆ ಮಲಗಿಸಿದ ರಾಯಲ್ಸ್

ಅಬುಧಾಬಿ: ಇಂದು ನಡೆಯುತ್ತಿರುವ ಐಪಿಎಲ್-2020 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 217ರನ್ ಗಳ ದೊಡ್ಡ ಟಾರ್ಗೆಟ್ ನೀಡಿದೆ.

ಇಂದು ಶಾರ್ಜಾದ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ರಾಜಸ್ಥಾನ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಅಂತಯೇ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು  ಸ್ಮಿತ್ ಚೆನ್ನೈ ಬೌಲರ್ ಗಳನ್ನು ಪರಿಪರಿಯಾಗಿ ಕಾಡಿದರು. ಸಿನ್ನರ್ ಗಳನ್ನು ಕಾಡಿದ ಈ ಜೋಡಿ ಚಾವ್ಲಾ ಮತ್ತು ಜಡೇಜಾ ಅವರು ಎಸೆದ 8 ಓವರಿನಲ್ಲಿ ಬರೋಬ್ಬರಿ 95 ರನ್ ಚಚ್ಚಿದರು. ಇದರಲ್ಲಿ ಚಾವ್ಲಾ ಅವರ ಒಂದೇ ಓವರಿನಲ್ಲಿ ನಾಲ್ಕು ಸಿಕ್ಸರ್ ಸಮೇತ 28 ರನ್ ಭಾರಿಸಿದರು.

ಆದರೆ ಕೊನೆಯ ಓವರಿನಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್ ಲುಂಗಿ ಎನ್‍ಜಿಡಿ ಅವರ ಓವರಿನಲ್ಲಿ ಸಿಕ್ಸರ್ ಗಳ ಮಳೆಗೈದರು. 19ನೇ ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ 186 ರನ್ ಗಳಿಸಿತ್ತು. ಆದರೆ ಮೊದಲ ಬಾಲನ್ನು ಸಿಕ್ಸರ್ ಗೆ ಅಟ್ಟಿದ ಅರ್ಚಾರ್ ಸತತವಾಗಿ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ತಂಡವನ್ನು 200 ರನ್‍ಗಳ ಗಡಿ ದಾಟಿಸಿದರು. ಕೊನೆಯ ಓವರಿನಲ್ಲಿ ರಾಯಲ್ಸ್ ತಂಡಕ್ಕೆ ಬರೋಬ್ಬರಿ 30ರನ್ ಬಂತು.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ದೀಪಕ್ ಚಹರ್, ಕೇವಲ ಆರು ರನ್ ಗಳಿಸಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟ್ ಮಾಡಿದರು. ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟವಾಡಿದರು. ಪವರ್ ಪ್ಲೇ ಮುಕ್ತಾಯದ ವೇಳೆಗೆ ರಾಜಸ್ಥಾನ್ ತಂಡ 54 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ಉತ್ತಮವಾಗಿ ಆಡಿದ ಸಂಜು ಸ್ಯಾಮ್ಸನ್ ಕೇವಲ 19 ಬಾಲಿನಲ್ಲಿ ಅರ್ಧಶತಕ ಸಿಡಿಸಿದರು.

ನಂತರದ ಓವರ್ ಗಳಲ್ಲಿ ಸಿಕ್ಸ್ ಫೋರ್ ಗಳ ಸುರಿಮಳೆಗೈದ ಸಂಜು ಸ್ಯಾಮ್ಸನ್ ಮತ್ತು ಸ್ಟೀವನ್ ಸ್ಮಿತ್ ಅವರು 10 ಓವರ್ ಮುಕ್ತಾಯಕ್ಕೆ ಬರೋಬ್ಬರಿ 119 ರನ್ ಸಿಡಿಸಿದರು. ಈ ಮೂಲಕ ಐಪಿಎಲ್-2020ಯ ಪ್ರಥಮ ಶತಕದ ಜೊತೆಯಾಟವನ್ನು ದಾಖಲಿಸಿದರು. ಆದರೆ 9 ಸಿಕ್ಸ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಲುಂಗಿ ಎನ್‍ಜಿಡಿ ಅವರ ಬೌಲಿಂಗ್‍ನಲ್ಲಿ 32 ಎಸೆತಗಳಲ್ಲಿ 74 ರನ್ ಸಿಡಿಸಿ ಔಟ್ ಆದರು.

ನಂತರ ಕಣಕ್ಕಿಳಿದ ಡೇವಿಡ್ ಮಿಲ್ಲರ್ ಅವರು ಇಲ್ಲದ ರನ್ ಕದಿಯಲು ಹೋಗಿ ಧೋನಿಯರಿಂದ ರನ್‍ಔಟ್ ಆದರು. ನಂತರ ಬಂದ ರಾಬಿನ್ ಉತ್ತಪ್ಪ ದೊಡ್ಡ ಹೊಡೆತಕ್ಕೆ ಕೈಹಾಕಿ 14ನೇ ಓವರಿನಲ್ಲಿ ಚಾವ್ಲಾ ಅವರಿಗೆ ವಿಕೆಟ್ ಕೊಟ್ಟರು. ಉತ್ತಪ್ಪ ನಂತರ ಬಂದ ರಾಹುಲ್ ತೇವಟಿಯಾ ಸ್ಯಾಮ್ ಕರ್ರನ್ ಅವರಿಗೆ ಔಟ್ ಆದರು. ನಂತರ ರಿಯಾನ್ ಪರಾಗ್ ಅವರು ಕೇವಲ 6 ರನ್ ಹೊಡೆದು ಪೆವಿಲಿಯನ್ ಸೇರಿದರು.

ನಂತರ ಪಂದ್ಯದ ಮೊದಲಿನಿಂದಲೂ ತಾಳ್ಮೆಯಾಗಿ ಆಡಿಕೊಂಡು ಬಂದಿದ್ದ ನಾಯಕ ಸ್ಮಿತ್ 47 ಎಸೆತದಲ್ಲಿ 69 ರನ್ ಭಾರಿಸಿದರು. 146.81ರ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿದ ಸ್ಮಿತ್ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ನಂತರ ಕೊನೆಯ ಓವರಿನಲ್ಲಿ ಅಬ್ಬರಿಸಿದ ಆರ್ಚಾರ್ ಸಿಕ್ಸ್ ಮೇಲೆ ಸಿಕ್ಸ್ ಸಿಡಿಸಿ ರಾಯಲ್ಸ್ ತಂಡವನ್ನು 200ರ ಗಡಿ ದಾಟಿಸಿದರು.

Click to comment

Leave a Reply

Your email address will not be published. Required fields are marked *