Connect with us

Corona

‘ಮಾಸ್ಕ್ ಧರಿಸು’ ಎಂದಿದ್ದಕ್ಕೆ ಪೊಲೀಸರನ್ನೇ ಥಳಿಸಿದ- ವಿಡಿಯೋ

Published

on

– ನೆಲದ ಮೇಲೆ ಬಿದ್ದು ಹೈಡ್ರಾಮಾ
– ಆರೋಪಿಯ ಹೈಡ್ರಾಮಾಗೆ ಖಾಕಿ ಫುಲ್ ಕಂಗಾಲು
– ಘಟನೆಯನ್ನ ಜಾರ್ಜ್ ಫ್ಲಾಯ್ಡ್ ಕೇಸ್‍ಗೆ ಹೋಲಿಸಿದ ನೆಟ್ಟಿಗರು

ಜೈಪುರ್: ಮಾಸ್ಕ್ ವಿಚಾರಕ್ಕೆ ವಾಗ್ವಾದ ನಡೆದು ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

ಜೋಧ್‍ಪುರದ ಬಾಲ್‍ದೇವ್ ನಗರ ನಿವಾಸಿ ಮುಖೇಶ್ ಕುಮಾರ್ ಪ್ರಜಾಪತ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ. ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮುಖೇಶ್ ಕುಮಾರ್ ಮಾಸ್ಕ್ ಧರಿಸದೆ ಸಾರ್ವಜನಿಕ ಪ್ರದೇಶದಲ್ಲಿ ಕುಳಿತ್ತಿದ್ದ. ಆತನನ್ನು ಗಮನಿಸಿದ ಪೊಲೀಸರು ಮಾಸ್ಕ್ ಧರಿಸು ಹಾಗೂ ದಂಡ ಪಾವತಿಸು ಎಂದು ಸೂಚಿಸಿದ್ದಾರೆ. ಆದರೆ ಮುಖೇಶ್ ದಂಡ ಕಟ್ಟಲು ನಿರಾಕರಿಸಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಇದರಿಂದಾಗಿ ಕೋಪಗೊಂಡ ಪೊಲೀಸರು ಮುಖೇಶ್‍ನನ್ನು ವಶಕ್ಕೆ ಪಡೆದು ಜೀಪ್‍ನಲ್ಲಿ ಹತ್ತಿಸಲು ಮುಂದಾಗಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮುಖೇಶ್ ಪೊಲೀಸರ ಕೊರಳುಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ನೆಲದ ಮೇಲೆ ಬಿದ್ದು ಹೈಡ್ರಾಮಾ ಸೃಷ್ಟಿಸಿದ್ದಾನೆ

ಮುಖೇಶ್ ವರ್ತನೆಯಿಂದ ಕಂಗೆಟ್ಟ ಪೊಲೀಸರು ಆತ ಕೆಳಗೆ ಬಿದ್ದಾಗ ಮುಖದ ಮೇಲೆ ಮೊಣಕಾಲು ಇಟ್ಟಿದ್ದಾರೆ. ಆದರೆ ಇದಕ್ಕೂ ಬಗ್ಗದ ಆರೋಪಿ ಮೇಲೆದ್ದು ಪುಂಡಾಟ ನಡೆಸಿ, ಮಾಸ್ಕ್ ಅನ್ನು ಕಿತ್ತು ಬಿಸಾಕಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋವನ್ನು ನೋಡಿದ ಕೆಲ ನೆಟ್ಟಿಗರು ದೃಶ್ಯವನ್ನು ಅಮೆರಿಕದ ಮಿನ್ನಿಯಾಪೋಲಿಸ್‍ನಲ್ಲಿ ನಡೆದ ಜಾರ್ಜ್ ಫ್ಲಾಯ್ಡ್ ಪ್ರಕರಣಕ್ಕೆ ಹೋಲಿಕೆ ಮಾಡಿದ್ದಾರೆ. ಆದರೆ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಆರೋಪಿ ಮುಖೇಶ್ ಕುಮಾರ್ ವಿರುದ್ಧ ಜೋಧ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖೇಶ್ ಈ ಹಿಂದೆ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿ ಕಣ್ಣಿಗೆ ಹಾನಿ ಮಾಡಿದ್ದ.