Crime
ಹಾಲಿನಲ್ಲಿ ಡಿಟರ್ಜೆಂಟ್, ಎಣ್ಣೆ ಮಿಕ್ಸ್ ಮಾಡ್ತಿದ್ದ ಖದೀಮರು ಅರೆಸ್ಟ್

– ತಿಂಗಳಿಗೆ ಒಂದೂವರ ಲಕ್ಷ ಹಣ ಸಂಪದಾನೆ
– ಎರಡೂವರೆ ವರ್ಷದಿಂದ ಕಳ್ಳತನ
ಜೈಪುರ: ಹಾಲಿನಲ್ಲಿ ಡಿಟರ್ಜೆಂಟ್ ಮತ್ತು ತಾಳೆ ಎಣ್ಣೆಯನ್ನು ಬೆರಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಲಿನ ಟ್ಯಾಂಕರ್, ಪಿಕಪ್ ಮತ್ತು ಕಳ್ಳತನಕ್ಕೆ ಬೇಕಾದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಲಾಗಿದ್ದು, ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಗ್ಯಾಂಗ್ ಹಾಲನ್ನು ಅಲ್ವಾರ್ನ ಲಕ್ಷ್ಮಣಗಧದ ಸಖಿ ಎಂಬ ಡೈರಿಯಿಂದ ಬರುತ್ತಿದ್ದನ್ನು ಕದ್ದು, ವಿಷಬೆರಿತ ಹಾಲನ್ನು ಹರಿಯಾಣದ ವಲ್ಲಭಗಧ್ನ ಗೋಪಾಲ್ ಡೈರಿಗೆ ಸರಬರಾಜು ಮಾಡುತ್ತಿದ್ದರು.
ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದೇಗೆ?
ಈ ಗ್ಯಾಂಗ್ ಸುಮಾರು ಹತ್ತು ದಿನಗಳಿಂದ ಅಲ್ವಾರ್ ನಗರದ ಸಮೀಪವಿರುವ ಹೋಟೆಲ್ನಲ್ಲಿ ಹಾಲಿನ ಟ್ಯಾಂಕರ್ನಿಂದ ಹಾಲು ಕಳ್ಳತನ ಮಾಡುತ್ತಿತ್ತು. ಕದ್ದ ಹಾಲಿಗೆ ಡಿಟರ್ಜೆಂಟ್ ಮತ್ತು ತಾಳೆ ಎಣ್ಣೆಯನ್ನು ಸೇರಿಸುತ್ತಿದ್ದರು. ಇಂದು ಹಾಲು ಕದ್ದು ಕಲಬೆರಕೆ ಮಾಡುವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ ಎಂದು ಐಪಿಎಸ್ ಅಧಿಕಾರಿ ಸದರ್ ತಾನಾಧಿಕಾರಿ ತಿಳಿಸಿದ್ದಾರೆ.
ಟ್ಯಾಂಕರ್ನಿಂದ ಹಾಲು ಕಳ್ಳತನ: ಹಾಲಿನ ಟ್ಯಾಂಕರ್ನಿಂದ ಈ ಖದೀಮರು ವಿಭಿನ್ನ ರೀತಿಯಲ್ಲಿ ಹಾಲನ್ನು ಕದಿಯುತ್ತಿದ್ದರು. ಟ್ಯಾಂಕರ್ ತೆರೆಯಲು ಇವರ ಬಳಿ ಇದ್ದ ನಕಲಿ ಕೀಲಿಗಳನ್ನು ಬಳಸುತ್ತಿದ್ದರು. ಅಲ್ಲದೆ ಸಂಪೂರ್ಣ ಮುದ್ರೆಯನ್ನು ತೆಗೆದುಹಾಕಿ ಮತ್ತೆ ಅದೇ ರೀತಿಯ ಮುದ್ರೆಯನ್ನು ಮರು ಹಾಕ್ತಿದ್ದರು. ಅಲ್ಲದೇ ಹಾಲು ಹೊರತೆಗೆಯಲು ಬಾಟಲಿಯನ್ನು ಹೇಗೆ ತೆರೆಯಬೇಕು ಎಂದು ತಿಳಿದಿದ್ದರು.
ಜಿಪಿಎಸ್ನನ್ನು ವಾಹನದಿಂದ ಬದಲಾಯಿಸಿದ್ದೇಗೆ?
ಹಾಲಿನ ಟ್ಯಾಂಕರ್ನ ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ ಗೊಳಿಸಲಾಗಿತ್ತು. ಹಾಲಿನ ವಾಹನ ಎಲ್ಲಿ ತಲುಪಿದೆ? ವಾಹನ ಚಲಿಸುತ್ತಿದ್ದೆಯೋ ಅಥವಾ ನಿಲ್ಲಿಸಲಾಗಿದೆಯೇ ಎಂದು ವಾಹನದ ಸಂಚಾರವನ್ನು ಕಂಟ್ರೋಲ್ ರೂಮ್ ನೋಡಿಕೊಳುತ್ತಿತ್ತು. ಆದ್ರೆ ಈ ಗ್ಯಾಂಗ್ ಜಿಪಿಎಸ್ನನ್ನು ಹಾಲಿನ ವಾಹನದಿಂದ ತೆರೆದು ಮತ್ತೊಂದು ಗಾಡಿಗೆ ಫಿಕ್ಸ್ ಮಾಡಿ. ಅವರು ಹೋಗುತ್ತಿದ್ದ ದಾರಿಯಲ್ಲಿಯೇ ಈ ವಾಹನವು ಹಿಂಬಾಲಿಸುತ್ತಿತ್ತು. ಆದ್ದರಿಂದ ಟ್ಯಾಂಕರ್ ವಾಹನ ಎಲ್ಲಿಯೂ ನಿಂತಿಲ್ಲ ಎಂದು ಕಂಟ್ರೋಲ್ ರೂಮ್ನವರು ಭಾವಿಸುತ್ತಿದ್ದರು. ಆದ್ರೆ ಹಾಲನ್ನು ಕದ್ದು ನಂತರ ಜಿಪಿಎಸ್ನನ್ನು ತೆಗೆದು ಹಾಲಿನ ಟ್ಯಾಂಕರ್ಗೆ ಪುನಃ ಖದೀಮರು ಫಿಕ್ಸ್ ಮಾಡುತ್ತಿದ್ದರು.
ಎರಡೂವರೆ ವರ್ಷದಿಂದ ಕಳ್ಳತನ: ತನಿಖೆಯಲ್ಲಿ ಕಳ್ಳರು ಸುಮಾರು ಎರಡೂವರೆ ವರ್ಷದಿಂದ ಹಾಲನ್ನು ಕದಿಯುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತಿ ದಿನ ಒಂದು ಟ್ಯಾಂಕರ್ನಲ್ಲಿ 20 ಸಾವಿರ ಲೀಟರ್ ಹಾಲು ಇರುತ್ತಿತ್ತು, ಅದರಲ್ಲಿ ಒಂದರಿಂದ ಎರಡು ಸಾವಿರ ಲೀಟರ್ ಹಾಲನ್ನು ತೆಗೆದು ಅಷ್ಟೇ ಪ್ರಮಾಣದಲ್ಲಿ ನೀರು ಮತ್ತು ತಾಳೆ ಎಣ್ಣೆ ಮತ್ತು ಡಿಟರ್ಜೆಂಟ್ನನ್ನು ಮಿಶ್ರಣ ಮಾಡುತ್ತಿದ್ದೆವು ಎಂದು ಕಳ್ಳರು ಹೇಳಿದ್ದಾರೆ.
ಅಲ್ವಾರ್ನ ಅನೇಕ ಸ್ಥಳಗಳಲ್ಲಿ ಹಾಲು ಕಲಬೆರಕೆ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಈ ಕುರಿತಂತೆ ಜನಸಾಮಾನ್ಯರು ಎಚ್ಚರದಿಂದರಬೇಕು. ತಾಳೆ ಎಣ್ಣೆ ಮತ್ತು ಡಿಟರ್ಜೆಂಟ್ ಬೆರಿಸಿದ ಹಾಲನ್ನು ಕುಡಿಯುವುದರಿಂದ ಯಕೃತ್ತು, ಮೂತ್ರಪಿಂಡ, ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯಕ್ಕೆ ಮಾರಕವಾಗುವಂತಹ ಅನೇಕ ರೋಗಗಳು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದರು.
ಸಂಜಯ್ ಕುಮಾರ್ ಪುತ್ರ ಪಪ್ಪು ರಾಮ್ ಜಾತಿ, ಜಾಟವ್ ನಿವಾಸಿಯಾಗಿರುವ ಟಿಸಾಮಾರ್ ಥಾನಾ ರಾಮ್ನಾಥ್, ಅಸ್ಲಂದ್ದಿನ್ ಪುತ್ರ ಸಹಮತ್ ಖಾನ್ ಬುಟೋಲಿಯಾ ನಿವಾಸಿಯಾಗಿದ್ದು, ಅವರ ಬಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ ಇದ್ದ ಅಸ್ಮತ್ ಮತ್ತು ಸಾಹುನ್ ಎಂಬ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
