Karnataka
ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ- ಮೀನಿಗಾಗಿ ಮುಗಿಬಿದ್ದ ಜನರು

ರಾಯ್ಪುರ: ಹೆದ್ದಾರಿಯಲ್ಲಿ ಮೀನು ತುಂಬಿದ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಬೆಳ್ಳಂಬೆಳಗ್ಗೆ ತಾಜಾ ಮೀನುಗಳಿಗಾಗಿ ಜನ ಮುಗಿಬಿದ್ದು ಬಾಚಿಕ್ಕೊಳ್ಳುತ್ತಿರುವ ಘಟನೆ ರಾಯ್ಪುರದಲ್ಲಿ ಕಂಡು ಬಂದಿದೆ.
ಮೀನುಗಳನ್ನು ತುಂಬಿಕೊಂಡು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಆಗ ಲಾರಿಯಲ್ಲಿದ್ದ ಮೀನುಗಳು ರಸ್ತೆ ತುಂಬಾ ಬಿದ್ದಿವೆ. ನೀರಿನಿಂದ ಹೊರ ಬಂದು ಚಡಪಡಿಸುತ್ತಿದ್ದ ತಾಜಾ ಮೀನುಗಳನ್ನು ಕಂಡು ನೂರಾರು ಜನರು ದೌಡಾಯಿಸಿದ್ದಾರೆ. ಮೀನುಗಳಿಗಾಗಿ ಮುಗಿಬಿದ್ದು ಬಾಚಿಕೊಳ್ಳುತ್ತಿರುವ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಹೆದರಾರಿಯಲ್ಲಿ ರಭಸವಾಗಿ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಂತ್ರಣ ತಪ್ಪಿ ಉರುಳಿ ಬಿದ್ದಿದೆ. ಆಗ ಲಾರಿಯಲ್ಲಿ ತಾಜಾ ಮೀನುಗಳು ರಸ್ತೆ ತುಂಬಾ ಬಿದ್ದಿದೆ. ಸುತ್ತಮುತ್ತಲಿನ ಜನರು ಮೀನಿಗಳು ಬಾಚಿ ತಮ್ಮ ಬ್ಯಾಗ್ಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಲಾರಿ ಬಿದ್ದ ಕೆಲವೇ ಕ್ಷಣದಲಿ ಜನರು ಸಿಕ್ಕ ಬ್ಯಾಗ್, ಪಾತ್ರೆ ಹಿಡಿದು ಸ್ಥಳಕ್ಕೆ ಓಡಿ ಬಂದು ಮೀನುಗಳನ್ನು ತುಂಬಿಸಿಕೊಂಡು ಖುಷಿಪಟ್ಟಿದ್ದಾರೆ.
रायपुर के मंदिर हसौद इलाके में हाइवे पर मछलियों से भरी पिकअप गाड़ी पलट गई, हादसे में कोई हताहत तो नहीं हुआ,जैसे- तैसे ड्राइवर ने खुद को बाहर निकाला। लेकिन, तब तक रास्ते पर बिखरी मछलियों को लेकर कुछ लोग भाग गए @ndtv @ndtvindia pic.twitter.com/mT6tOTFC7K
— Anurag Dwary (@Anurag_Dwary) January 28, 2021
ಮೀನು ತುಂಬಿದ್ದ ಲಾರಿ ಉರುಳಿಬಿದ್ದು ಅಪಾರಪ್ರಮಾಣವಾದ ನಷ್ಟವಾಗಿದೆ. ಈ ವಿಚಾರವನ್ನು ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯರ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎತ್ತಲಾಗಿದೆ. ಉಳಿದ ಕೆಲವು ಮೀನುಗಳನ್ನು ಲಾರಿಗೆ ತುಂಬಿ ರಾಯ್ಪುರಕ್ಕೆ ಕಳುಹಿಸಲಾಗಿದೆ.
