ಬೆಂಗಳೂರು: ನಗರದ ಇಂದು ಹಲವಡೆ ಗಾಳಿ ಸಮೇತ ಮಳೆಯಾಗಿದ್ದು, ಕೆಲವು ಕಡೆ ಮರಗಳು ಧರೆಗೆ ಉರುಳಿವೆ.
ನಗರದಲ್ಲಿ ಸಂಜೆ ಸುರಿದ ಮಳೆಗೆ 12 ಮರಗಳು ಧರೆಗುರುಳಿವೆ. ಕೋರಮಂಗಲ ಕ್ಲಬ್ ರಸ್ತೆ, ಇಂದಿರಾನಗರ, ಸಿಎಂಎಚ್ ರಸ್ತೆ, ಎಲ್ಐಸಿ ಆಫೀಸ್ ಜೆಬಿ ನಗರ, ಎಚ್ಎಎಲ್, ಎಚ್ಎಸ್ಆರ್ ಲೇಔಟ್, ಜೀವನ್ ಭೀಮಾ ನಗರ, ಕೆಎಂಹೆಚ್ ಕಾಲೋನಿ, ಟ್ರಿನಿಟಿ ಸರ್ಕಲ್, ಮೇಕ್ರಿಸರ್ಕಲ್ ಗಳಲ್ಲಿ ಮರಗಳು ಬಿದ್ದಿವೆ.
Advertisement
Advertisement
ಇನ್ನು ಮಲ್ಲೇಶ್ವರಂ, ವೈಯಾಲಿಕಾವಲ್, ವಿಧಾನಸೌಧ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ಹಲವಡೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಯಶವಂತಪುರ, ಶಾಂತಿನಗರ, ಕಾರ್ಪೊರೇಶನ್, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ನಗರದಲ್ಲೆಡೆ ಮಳೆಯಾಗಿದೆ.
Advertisement
Advertisement