Connect with us

Crime

ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಮೇಲೆ ಅತ್ಯಾಚಾರ

Published

on

– ಜ್ಯೂಸ್‍ಗೆ ಮತ್ತು ಬರುವ ಔಷಧಿ ನೀಡಿ ಕೃತ್ಯ ಎಸಗಿದ ಕಾಮುಕರು
– ಕೆಲಸ ಕೊಡಿಸುವುದಾಗಿ ಕರೆಸಿ, ಕಚೇರಿಯಲ್ಲೇ ಅತ್ಯಾಚಾರ

ಲಕ್ನೋ: ಇಬ್ಬರು ಕಾಮುಕ ರೈಲ್ವೆ ಅಧಿಕಾರಿಗಳು ನಿಲ್ದಾಣದ ಆವರಣದಲ್ಲಿಯೇ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ವಿಕೃತವಾಗಿ ವರ್ತಿಸಿದ್ದಾರೆ.

ಉತ್ತರ ಪ್ರದೇಶದ ಭೋಪಾಲ್‍ನ ಮುಖ್ಯ ರೈಲ್ವೆ ನಿಲ್ದಾಣದಲ್ಲೇ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ 45 ವರ್ಷದ ರಾಜೇಶ್ ತಿವಾರಿಯನ್ನು ಬಂಧಿಸಲಾಗಿದೆ. ಭೋಪಾಲ್ ರೈಲ್ವೆ ವಿಭಾಗದ ಸೆಕ್ಯೂರಿಟಿ ಕೌನ್ಸಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿ ಹಾಗೂ ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಭೋಪಾಲ್ ರೈಲ್ವೆ ವಿಭಾಗದ ರಾಜೇಶ್ ತಿವಾರಿ, ಸೆಕ್ಯೂರಿಟಿ ಕೌನ್ಸಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿಯನ್ನು ಬಂಧಿಸಿದ್ದೇವೆ ಎಂದು ಭೋಪಾಲ್ ಸುಪರಿಂಟೆಂಡೆಂಟ್ ಆಫ್ ರೈಲ್ವೆ ಪೊಲೀಸ್(ಎಸ್‍ಆರ್ ಪಿ) ಹಿತೇಶ್ ಚೌಧರಿ ಮಾಹಿತಿ ನೀಡಿದ್ದಾರೆ.

ಯುವತಿ ಉತ್ತರ ಪ್ರದೇಶದ ಮಾಹೋಬ್‍ನವರಾಗಿದ್ದು, ತಿವಾರಿ ಯುವತಿಯ ಫೇಸ್ಬುಕ್ ಸ್ನೇಹಿತನಾಗಿದ್ದ. ಕೆಲಸ ಕೊಡಿಸುವುದಾಗಿ ಭೋಪಾಲ್ ರೈಲ್ವೆ ನಿಲ್ದಾಣದ ಪ್ರದೇಶಕ್ಕೆ ಕರೆಸಿಕೊಂಡಿದ್ದ. ಯುವತಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವೆಸ್ಟ್ ಸೆಂಟ್ರಲ್ ರೈಲ್ವೆ ಕಚೇರಿಯ ಮೊದಲ ಮಹಡಿಯಲ್ಲಿನ ರೂಂನಲ್ಲಿ ಕೂಡಿ ಹಾಕಿದ್ದ. ನಂತರ ಅವರ ಇನ್ನೊಬ್ಬ ಸ್ನೇಹಿತ ರೈಲ್ವೆ ಅಧಿಕಾರಿಯೊಂದಿಗೆ ಮತ್ತು ಬರುವ ಔಷಧಿ ಬೆರೆಸಿದ ಪಾನೀಯವನ್ನು ನೀಡಿ, ಅತ್ಯಾಚಾರ ಎಸಗಿದರು ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ನಂತರ ಅವಳಿಗೆ ಪ್ರಜ್ಞೆ ಬಂದಿದ್ದು, ತಕ್ಷಣವೇ ರೈಲ್ವೆ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ನಾವು ಬಂಧಿಸಿದ್ದೇವೆ. ಆದರೆ ಯುವತಿ ಆತನನ್ನು ಗುರುತಿಸಲು ಕಾಯುತ್ತಿದ್ದೇವೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *