ಮೋದಿ ಮೇಲಿನ ವಿಕಲಾಂಗನ ಅಭಿಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ!

Advertisements

ರಾಯಚೂರು: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ದೇವರಿಗೆ ಹರಕೆ ಹೊತ್ತಿದ್ದ ರಾಯಚೂರಿನ ಮೋದಿ ಅಭಿಮಾನಿ ತನ್ನ ದೇಹ ದಂಡಿಸಿ ಹರಕೆ ತೀರಿಸಿದ್ದಾರೆ.

Advertisements

ಮಸ್ಕಿ ತಾಲೂಕಿನ ಬಸಾಪುರ ಗ್ರಾಮದ ಮುದ್ದಪ್ಪ ವಿಕಲಾಂಗನಾಗಿದ್ದರೂ ಮೋದಿ ಗೆದ್ದ ಬಳಿಕ ಇಡೀ ಊರು ತುಂಬ ದೀರ್ಘದಂಡ ನಮಸ್ಕಾರ ಹಾಕುವುದಾಗಿ ಊರ ದೇವರಿಗೆ ಹರಕೆ ಹೊತ್ತಿದ್ದರು. ಈಗ ಚುನಾವಣೆ ಫಲಿತಾಂಶದ ಬಳಿಕ ಊರು ತುಂಬಾ ಬಾಜಿ- ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡುತ್ತಾ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ.

Advertisements

ಮೋದಿ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿರುವ ಮುದ್ದಪ್ಪನ ಅಭಿಮಾನಕ್ಕೆ ಇಡೀ ಗ್ರಾಮವೇ ದಂಗಾಗಿದೆ. ಅಲ್ಲದೆ ಮೋದಿ ಅಭಿಮಾನಿಗೆ ಗ್ರಾಮಸ್ಥರು ಸಾಥ್ ನೀಡಿದ್ದು ಹರಕೆ ತೀರಿಸಲು ಸಹಾಯ ಮಾಡಿದ್ದಾರೆ.

Advertisements
Exit mobile version