Connect with us

ಪೆಟ್ರೋಲ್ ಕಳ್ಳತನ ವೇಳೆ ಸಿಕ್ಕಿಬಿದ್ದ ಯುವಕರು – ಸ್ಥಳೀಯರಿಂದ ಧರ್ಮದೇಟು

ಪೆಟ್ರೋಲ್ ಕಳ್ಳತನ ವೇಳೆ ಸಿಕ್ಕಿಬಿದ್ದ ಯುವಕರು – ಸ್ಥಳೀಯರಿಂದ ಧರ್ಮದೇಟು

ರಾಯಚೂರು: ಬೈಕ್‍ಗಳಲ್ಲಿನ ಪೆಟ್ರೋಲ್ ಕದ್ದು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ ಯುವಕರನ್ನ ಹಿಡಿದು ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಬಳಿ ನಡೆದಿದೆ.

ರಾತ್ರಿ ವೇಳೆ ಕಾಳಿಕಾ ದೇವಸ್ಥಾನದ ಡಾಬಾ ಬಳಿ ಪೆಟ್ರೋಲ್ ಕಳ್ಳತನ ವೇಳೆ ಸಿಕ್ಕಿಬಿದ್ದಿದ್ದಾರೆ. ಪಾರ್ಕ್ ಮಾಡಿದ ಬೈಕ್ ಗಳ ಪೆಟ್ರೋಲ್ ಕಳ್ಳತನ ಮಾಡಿ ಅದನ್ನು ಬಾಟಲ್ ಗಳಲ್ಲಿ ಕದ್ದು ಬ್ಲ್ಯಾಕ್ ನಲ್ಲಿ ಮಾರಾಟ ಮಾಡುತ್ತಿದ್ದರು. ಬಹಳ ದಿನಗಳಿಂದ ನಡೆದಿದ್ದ ಪೆಟ್ರೋಲ್ ಕಳ್ಳತನಕ್ಕೆ ಈಗ ಬ್ರೇಕ್ ಬಿದ್ದಂತಾಗಿರುವುದಕ್ಕೆ ಜನ ನಿಟ್ಟುಸಿರುಬಿಟ್ಟಿದ್ದಾರೆ.

ದಿನೇ ದಿನೇ ಪೆಟ್ರೋಲ್ ಬೆಲೆ ಏರಿಕೆ ಹೊತ್ತಲ್ಲಿ ಬೈಕ್ ನಲ್ಲಿದ್ದ ಪೆಟ್ರೋಲ್ ರಾತ್ರೋರಾತ್ರಿ ಕಳ್ಳತನವಾಗುತ್ತಿದ್ದರಿಂದ ಇಲ್ಲಿನ ಸ್ಥಳೀಯರು ಬೇಸತ್ತಿದ್ದರು. ಹೀಗಾಗಿ ಸಿಕ್ಕಿಬಿದ್ದ ಪೆಟ್ರೋಲ್ ಕಳ್ಳರನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಮುದಗಲ್ ಠಾಣೆ ಪೊಲೀಸರಿಗೆ ಪೆಟ್ರೋಲ್ ಕಳ್ಳರನ್ನ ಒಪ್ಪಿಸಿದ್ದಾರೆ.

Advertisement
Advertisement