
ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿ ಮೀರಿದೆ. ಅಕ್ರಮ ಮರಳು ಸಾಗಾಟ ರಾತ್ರಿ ಹೊತ್ತು ನಡೆಯುತ್ತಿರುವುದು ತಹಶೀಲ್ದಾರ್ ದಾಳಿಯಿಂದ ತಿಳಿದುಬಂದಿದೆ.
Advertisements
ಟ್ರ್ಯಾಕ್ಟರ್,ಟಿಪ್ಪರ್ಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತದೆ. ಅಕ್ರಮ ಮರಳು ಸಾಗಣೆ ಹಿನ್ನೆಲೆ ಮಸ್ಕಿ ತಹಶೀಲ್ದಾರ್ ಆರ್ ಕವಿತಾ ದಾಳಿ ನಡೆಸಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬಾಲ್ಯ ವಿವಾಹ- ಬಾಲಕಿಯ ಪತಿ, ಪೋಷಕರ ವಿರುದ್ಧ ದೂರು ದಾಖಲು
Advertisements
ಮಸ್ಕಿ ತಾಲೂಕಿನ ಗುಡದೂರು, ಹಂಪನಾಳ ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ರೇಡ್ ಮಾಡಿದೆ. ಅಕ್ರಮವಾಗಿ ಮರಳು ಸಾಗಿಸಲು ಸಿದ್ಧವಿದ್ದ ಟ್ರ್ಯಾಕ್ಟರ್ಗಳ ಮೇಲೆ ದಾಳಿ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ನಿಷೇಧ ಇದ್ದರು, ಮರಳು ಸಾಗಾಟ ನಡೆದಿದೆ. ತಹಶೀಲ್ದಾರ್ ದಾಳಿ ಹಿನ್ನೆಲೆ ಸ್ಥಳಕ್ಕೆ ತುರುವಿಹಾಳ ಪೊಲೀಸರು ಭೇಟಿ ನೀಡಿದ್ದು, ಟ್ರ್ಯಾಕ್ಟರ್ಗಳನ್ನ ವಶಕ್ಕೆ ಪಡೆದಿದ್ದಾರೆ.
Advertisements
Advertisements