Districts
ಶೀಘ್ರದಲ್ಲೇ ಮಂತ್ರಾಲಯ ಮಠದಿಂದ ವಿಶ್ವವಿದ್ಯಾಲಯ ಸ್ಥಾಪನೆ: ಸುಬುಧೇಂದ್ರತೀರ್ಥ ಸ್ವಾಮೀಜಿ

ರಾಯಚೂರು: ಶೀಘ್ರದಲ್ಲೇ ಮಂತ್ರಾಲಯ ಮಠದಿಂದ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 40 ನೇ ಪ್ರಾಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿ, ಮಂತ್ರಾಲಯ ಮಠ ವೈದಿಕ ಶಿಕ್ಷಣದ ಜೊತೆ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಶೀಘ್ರದಲ್ಲೇ ವಿಶ್ವವಿದ್ಯಾಲಯವನ್ನೂ ಆರಂಭಿಸಲಾಗುತ್ತದೆ ಎಂದರು.
ಮಂತ್ರಾಲಯ ಮಠ ಮೊದಲಿನಿಂದಲೂ ಶಿಕ್ಷಣಕ್ಕೆ ಒತ್ತುಕೊಟ್ಟಿದೆ. ಈಗ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ಹಣವನ್ನು ಗಳಿಸಬಹುದು ಆದರೆ ಖರ್ಚು ಮಾಡಿದಂತೆ ಅದು ಕಡಿಮೆಯಾಗುತ್ತದೆ. ವಿದ್ಯೆ ಯಾವ ದೇಶಕ್ಕೆ ಹೋದರು ಕಡಿಮೆಯಾಗುವುದಿಲ್ಲ ಹೆಚ್ಚಾಗುತ್ತದೆ ಎಂದರು.
ಸರ್ಕಾರಗಳು ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು. ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಅಂತ ಮಂತ್ರಾಲಯ ಮಠದ ಪೀಠಾಧಿಪತಿ ಹೇಳಿದ್ದಾರೆ.
