Districts
ಸಾರಿಗೆ ಬಸ್ಸಿನಲ್ಲಿರಲಿಲ್ಲ ಕೊರೊನಾ ರೂಲ್ಸ್- ಪ್ರಯಾಣಿಕರು ಆಕ್ರೋಶ

– ಬದಲಿ ವ್ಯವಸ್ಥೆ ಮಾಡಿದ ಸಿಬ್ಬಂದಿ
ರಾಯಚೂರು: ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂತ್ರಾಲಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬಂದಿದ್ದರು. ಆದರೆ ಇವರು ರಾಯಚೂರು- ಬೆಂಗಳೂರು ಮಾರ್ಗದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದಾರೆ. ಅಲ್ಲದೆ ಸಾರಿಗೆ ಸಿಬ್ಬಂದಿಯೊಂದಿಗೆ ಪ್ರಯಾಣಿಕರ ಮಾತಿನ ಚಕಮಕಿ ನಡೆಸಿದ್ದಾರೆ. ಬಸ್ಸಿನಲ್ಲಿ ಸ್ವಚ್ಛತೆಯಿಲ್ಲ, ಸೀಟುಗಳು ಹಾಳಾಗಿರುವುದರಿಂದ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಎರಡು ಬಸ್ಸುಗಳನ್ನ ಪ್ರಯಾಣಿಕರು ನಿಲ್ಲಿಸಿದ್ದಾರೆ. ಬಸ್ ಬದಲಿಸುವಂತೆ ಒತ್ತಾಯ, ರಿಸರ್ವೇಷನ್ ಆಗಿದ್ದರೂ ಪ್ರಯಾಣಿಕರು ಬಸ್ ಹತ್ತಲಿಲ್ಲ. ಹೀಗಾಗಿ ಸಾರಿಗೆ ಸಿಬ್ಬಂದಿ ಕೊನೆಗೆ ಬದಲಿ ಬಸ್ ವ್ಯವಸ್ಥೆ ಮಾಡಿದರು.
