Connect with us

Ayodhya Updates

‘ರಾಮ ಅಂದರೆ ಪ್ರೀತಿ, ಸಹಾನುಭೂತಿ, ನ್ಯಾಯ’: ರಾಹುಲ್ ಗಾಂಧಿ

Published

on

-ರಾಮಮಂದಿರ ಶಿಲಾನ್ಯಾಸದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರತಿಕ್ರಿಯೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೆರವೇರಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರ, ಸಂಸದ ರಾಹುಲ್ ಗಾಂಧಿ ರಾಮನ ಅತ್ಯುತ್ತಮ ಮಾನವ ಗುಣಗಳ ವ್ಯಕ್ತಿ ಎಂದು ಸ್ಮರಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಗವಾನ್ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕ. ಆ ಗುಣಗಳು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ. ರಾಮ ಎಂದರೇ ಪ್ರೀತಿ, ಅದು ಎಂದಿಗೂ ಅಸಹ್ಯವಾಗಿ ಕಾಣುವುದಿಲ್ಲ. ರಾಮ ಎಂದರೇ ಸಹಾನುಭೂತಿ ಅದು ಎಂದಿಗೂ ಕ್ರೂರವಾಗಿ ಕಾಣಿಸುವುದಿಲ್ಲ. ರಾಮ ಎಂದರೇ ನ್ಯಾಯ ಅಲ್ಲಿ ಎಂದಿಗೂ ಅನ್ಯಾಯಕ್ಕೆ ಜಾಗವಿಲ್ಲ ಎಂದು ಹೇಳಿದ್ದಾರೆ.

 सरलता, साहस, संयम, त्याग, वचनवद्धता, दीनबंधु राम नाम का सार है। राम सबमें हैं, राम सबके साथ हैं।

ಇದಕ್ಕೂ ಮುನ್ನ ರಾಮಮಂದಿರ ಶಿಲಾನ್ಯಾಸದ ಕುರಿತು ಟ್ವೀಟ್ ಮಾಡಿದ್ದ ಪ್ರಿಯಾಂಕಾ ಗಾಂಧಿ, ಶ್ರೀರಾಮ ಸರಳತೆ, ಸಹಾಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ನಿಧಿಯಾಗಿದ್ದ ರಾಮಮಂದಿರ ಭೂಮಿ ಪೂಜೆ ಸಮಾರಂಭ, ರಾಮನ ಸಂದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಆಚರಣೆಯಾಗಲಿದೆ ಎಂದು ಭಾವಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದರು.

ಇತ್ತ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಯುಪಿ ಸಿಎಂ ಯೋಗಿ ಆಧಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾವಗತ್ ಸಾಥ್ ನೀಡಿದರು.

ರಾಮ ಮಂದಿರ ನಿರ್ಮಾಣದ ಕುರಿತು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು, ಮಸೀದಿಗೆ ಬೇರೆಡೆ ಸ್ಥಳ ನೀಡಬೇಕು ಎಂದು ತಿಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್ ಸಹ ಸ್ವಾಗತಿಸಿತ್ತು. ರಾಮ ಸೇತು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗ 2007ರಲ್ಲಿ ರಾಮನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ ಎಂದು ಯುಪಿಎ ಸರ್ಕಾರ ಅಫಿಡವಿತ್‌ ಸಲ್ಲಿಸಿತ್ತು. ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸ ಭಾರತದ ಪುರಾತನ ಸಾಹಿತ್ಯವಾಗಿದೆ. ಆದರೆ ಇವುಗಳನ್ನು ಇತಿಹಾಸದ ಆಕಾರ ಗ್ರಂಥ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಫಿಡವಿತ್‌ನಲ್ಲಿ ಉಲ್ಲೇಖಿಸಿತ್ತು.

Click to comment

Leave a Reply

Your email address will not be published. Required fields are marked *