Connect with us

ಕೊರೊನಾ ಸ್ಫೋಟ – ಸಾರ್ವಜನಿಕ ರ‍್ಯಾಲಿಗಳನ್ನ ರದ್ದುಗೊಳಿಸಿದ ರಾಹುಲ್ ಗಾಂಧಿ

ಕೊರೊನಾ ಸ್ಫೋಟ – ಸಾರ್ವಜನಿಕ ರ‍್ಯಾಲಿಗಳನ್ನ ರದ್ದುಗೊಳಿಸಿದ ರಾಹುಲ್ ಗಾಂಧಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರದ್ದು ಮಾಡಿರುವುದಾಗಿ ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ. ನಾನು ಎಲ್ಲ ಸಾರ್ವಜನಿಕ ರ‍್ಯಾಲಿಗಳನ್ನು ಬಂದ್ ಮಾಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

8 ಹಂತದ   ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ 5 ಹಂತದ ಚುನಾವಣೆ ಅಂತ್ಯವಾಗಿದ್ದು, 3ಹಂತದ ಚುನಾವಣೆ ಬಾಕಿ ಇದೆ. ಕೊರೊನಾ ಪ್ರಕರಣ ದಿಢೀರನೆ ಏರಿಕೆ ಕಂಡಿದೆ. ಮೊದಲ 5 ಹಂತದ ಚುನಾವಣೆ ವೇಳೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳು ಆರೋಗ್ಯ ಸಚಿವಾಲಯ ಆದೇಶಿಸಿದ್ದ, ಕೊವೀಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿವೆ.

ರಾಜಕೀಯ ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳನ್ನು ಮಾಡಿ ಕೊರೊನಾ ನಿಯಮವಾದ ಸಾಮಾಜಿಕ ಅಂತರ, ಮಾಸ್ಕ್‍ಗಳನ್ನು ಹಾಕುವ ನಿಯಮಗಳನ್ನು ಫಾಲೋ ಮಾಡದೆ ನಿಯಮವನ್ನು ಗಾಳಿಗೆ ತೋರಿದೆ. ಹೀಗಾಗಿ ಸಂಜೆ 7 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಯಾವುದೇ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿಸಭೆಗಳಿಗೆ ಅನುಮತಿ ಇಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ.

ಸ್ಟಾರ್ ಪ್ರಚಾರಕರು, ರಾಜಕೀಯ ನಾಯಕರು, ಅಭ್ಯರ್ಥಿಗಳು ಚುನಾವಣಾ ವೇಳೆ ಕೊವೀಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗ ಕೊರೊನಾ ಸೋಂಕು ಅಪಾಯವನ್ನು ಸ್ವಯಂ ಆಹ್ವಾನಿಸುವುದಲ್ಲದೆ ಇತರರಿಗೂ ಹರಡಲು ಕಾರಣವಾಗುತ್ತಿದ್ದಾರೆ ಎಂದು ಚುನಾವಣಾ ಆಯೋಗ ಗರಂ ಆಗಿತ್ತು. ಇದೀಗ ರಾಹುಲ್ ಗಾಂಧಿ ತಮ್ಮ ರ‍್ಯಾಲಿಗೆ ಬ್ರೇಕ್ ಹಾಕಿದ್ದಾರೆ.

Advertisement
Advertisement
Advertisement