ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್‌ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು

Advertisements

ತಿರುವನಂತಪುರಂ: ʼಭಾರತ್‌ ಜೋಡೋ ಯಾತ್ರೆʼ(Bharat Jodo Yatra) ವೇಳೆ ಜೊತೆಯಲ್ಲಿ ಸಾಗುತ್ತಿದ್ದ ಬಾಲಕಿಯ ಕಾಲಿಗೆ ಪಾದರಕ್ಷೆ ಧರಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಸಹಾಯ ಮಾಡುತ್ತಿರುವ ದೃಶ್ಯದ ವೀಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Advertisements

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕೇರಳದ ಹರಿಪಾದ್‌ನಿಂದ ಭಾನುವಾರ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಬೆಳಗ್ಗೆ 6:30ರ ನಂತರ ಪ್ರಾರಂಭವಾದ ಯಾತ್ರೆಯ ಹಲವಾರು ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕೆಲವೆಡೆ ರಾಹುಲ್‌ ಗಾಂಧಿಯವರು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿರುವ ಜನರನ್ನು ಸ್ವಾಗತಿಸುತ್ತಿರುವುದು ಕಂಡುಬಂದರೆ, ಇನ್ನು ಕೆಲವೆಡೆ ಅವರು ಮೆರವಣಿಗೆಯಿಂದ ವಿರಾಮ ತೆಗೆದುಕೊಂಡು ಮಾರ್ಗದುದ್ದಕ್ಕೂ ಹೋಟೆಲ್‌ಗಳಲ್ಲಿ ಚಹಾ ಸವಿಯುತ್ತಿರುವುದನ್ನು ಕಾಣಬಹುದು.

Advertisements

ಯಾತ್ರೆಯ 11ನೇ ದಿನದ ವೀಡಿಯೋವೊಂದರಲ್ಲಿ, ಬಾಲಕಿಯೊಬ್ಬಳಿಗೆ(Little Girl) ರಾಹುಲ್‌ ಗಾಂಧಿ ಪಾದರಕ್ಷೆ ತೊಡಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೀಡಿಯೋವನ್ನು ಮಹಿಳಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʼಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆʼ ಎಂದು ಡಿಸೋಜಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಬ್ಬರೇ ಎಂಎಲ್‌ಎ ಟಿಕೆಟ್‌ ನೀಡಲು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ: ದಿನೇಶ್‌ ಗುಂಡೂರಾವ್‌

ʻಮಾನವೀಯ ಸ್ಪರ್ಶದ ನಾಯಕʼ, ʼಹೃದಯವಂತʼ ಎಂದು ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ರಾಹುಲ್‌ ಗಾಂಧಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಪಕ್ಷ ಮುಖ್ಯ, ಸಣ್ಣ ವಿಚಾರ ದೊಡ್ಡದು ಮಾಡೋದು ಬೇಡ: ಆರ್.ವಿ.ದೇಶಪಾಂಡೆ

Live Tv

Advertisements
Exit mobile version