Connect with us

Karnataka

ಗಂಟೆ ಬಾರಿಸುವುದು, ಲಾಕ್‍ಡೌನ್ ಸರ್ಕಾರದ ಕಾರ್ಯತಂತ್ರ – ರಾಹುಲ್ ಗಾಂಧಿ

Published

on

ನವದೆಹಲಿ: ಕೋವಿಡ್19 ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಅವರು ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಮನಬಂದಂತೆ ಲಾಕ್‍ಡೌನ್ ಹೇರುವುದು, ಗಂಟೆ ಬಾರಿಸುವುದು ಮತ್ತು ದೇವರನ್ನು ಪ್ರಾರ್ಥಿಸಿ ಹಾಡುವುದು ಸರ್ಕಾರದ ಕಾರ್ಯತಂತ್ರಗಳಾಗಿವೆ ಎಂದು ವ್ಯಂಗ್ಯಮಾಡಿ ಟ್ವೀಟ್ ಮಾಡಿ ಕೇಂದ್ರಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮಾಡುತ್ತಿರುವ ಕಾರ್ಯಗಳ ಕುರಿತಾಗಿ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.

ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಯೋಜನೆ ರೂಪಿಸದೆ ಸರ್ಕಾರ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್ 19 ನಿಯಂತ್ರಣ ಮತ್ತು ಲಸಿಕೆ ಅಭಿಯಾನದ ಕುರಿತು ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಯೋಜನೆಗಳನ್ನು ಈ ಹಿಂದೆಯೂ ಕಾಂಗ್ರೆಸ್ ಟೀಕಿಸಿತ್ತು.

Click to comment

Leave a Reply

Your email address will not be published. Required fields are marked *