Connect with us

Cricket

ಕೊಹ್ಲಿ ‘ಸಕ್ಸಸ್ ಮಂತ್ರ’ ಬಿಚ್ಚಿಟ್ಟ ರಾಹುಲ್ ದ್ರಾವಿಡ್

Published

on

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇದುವರೆಗೂ ಸಾಧಿಸಿರುವ ಗೆಲುವುಗಳಿಗಿಂತಲೂ ಅವರು ತಮ್ಮ ಜರ್ನಿಯಲ್ಲಿ ಕಲಿತಿರುವ ಅಂಶಗಳು ವಿಶ್ವಕಪ್ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಟೀಂ ಇಂಡಿಯಾ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ನೀರಸ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರ ಬಿದ್ದ ಬಳಿಕ ಕೊಹ್ಲಿ ನಾಯಕತ್ವದ ಕುರಿತು ಚರ್ಚೆ ನಡೆದಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಗೆ ಐಪಿಎಲ್ ಸೋಲಿನಿಂದ ಹೇಗೆ ಹೊರಬರುತ್ತಾರೆ ಎಂಬ ಬಗ್ಗೆಯೂ ಕುತೂಹಲ ಹೆಚ್ಚಾಗಿತ್ತು.

ಮಾಧ್ಯಮ ಸಂದರ್ಶನವೊಂದರಲ್ಲಿ ಕೊಹ್ಲಿ ಆಟದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ದ್ರಾವಿಡ್, ವಿರಾಟ್ ಪ್ರತಿ ಭಾರೀ ವಿದೇಶಿ ಪ್ರವಾಸದ ಟೂರ್ನಿ ಹಾಗೂ ಭಾರತದಲ್ಲಿ ನಡೆದ ಟೂರ್ನಿಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತಿದ್ದಿಕೊಳ್ಳುತ್ತ ಬಂದಿದ್ದಾರೆ. ನಾವು ಅಸಾಧ್ಯ ಎಂದುಕೊಂಡಿದ್ದ ಸಾಧನೆಗಳಿಗೆ ಹತ್ತಿರವಾಗುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಶತಕಗಳ ಸಾಧನೆ ಇದಕ್ಕೆ ಬಹುಮುಖ್ಯ ಉದಾಹರಣೆ ಎಂದಿದ್ದಾರೆ.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಮೊದಲು ಬಾರಿ ಅಷ್ಟು ಯಶಸ್ವಿಯಾಗಿರಲಿಲ್ಲ. ಆದರೆ 2ನೇ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ಇದೇ ಅವರು ನಿರಂತರಾಗಿ ಕಲಿಯುತ್ತಿದ್ದಾರೆ ಎಂಬುವುದಕ್ಕೆ ಸೂಕ್ತ ನಿರ್ದಶನ ಎಂದಿದ್ದಾರೆ. ಇದೇ ವೇಳೆ ಧೋನಿ ನಾಯಕತ್ವದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇ 30 ರಿಂದ ಆರಂಭವಾಗುವ ಟೂರ್ನಿ 11 ವಿವಿಧ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಸೆಮಿ ಫೈನಲ್ ಪಂದ್ಯಗಳು ಮ್ಯಾಂಚೆಸ್ಟರ್ ಮತ್ತು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜುಲೈ 14 ರಂದು ಲಾರ್ಡ್ಸ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ವಿಶ್ವಕಪ್‍ನಲ್ಲಿ ತನ್ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜೂನ್ 5ರಂದು ಸೌತ್ ಆಫ್ರಿಕಾ ವಿರುದ್ಧ ಆಡಲಿದೆ.