Sunday, 24th March 2019

Recent News

ಪೊಲೀಸ್ ಅಧಿಕಾರಿಯಾದ ಗರ್ಭಿಣಿ ರಾಧಿಕಾ

ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅವರು ಪೊಲೀಸ್ ಉಡುಪಿನಲ್ಲಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಗರ್ಭಿಣಿ ರಾಧಿಕಾ ಅವರನ್ನು ಪೊಲೀಸ್ ಉಡುಪಿನಲ್ಲಿ ಅಭಿಮಾನಿಗಳು ನೋಡಿ ಫಿದಾ ಆಗಿದ್ದಾರೆ. ಇವರು ತಮ್ಮ ಮುಂದಿನ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಾಡುತ್ತಿದ್ದಾರಾ ಅಥವಾ ಗರ್ಭಿಣಿ ಬಯಕೆಗೆ ಪೊಲೀಸ್ ಉಡುಪು ಧರಿಸಿದ್ದಾರೆ ಎಂಬ ಯೋಚನೆಗಳನ್ನು ಮಾಡುತ್ತಿದ್ದಾರೆ. ಆದರೆ ರಾಧಿಕಾ ಅವರು ಫೋಟೋವನ್ನು ಪೋಸ್ಟ್ ಮಾಡುವಾಗಲೇ ಈ ಬಗ್ಗೆ ಬರೆದುಕೊಂಡಿದ್ದಾರೆ.

‘ಇದು ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಾನು ನಟಿಸಿದ ವಿಶೇಷ ಪಾತ್ರದ ಫೋಟೋವಾಗಿದೆ. ಆದ್ರೆ ಈ ಸಿನಿಮಾದಲ್ಲಿ ನಾನು ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿಲ್ಲ. ಈ ಚಿತ್ರದಲ್ಲಿ ಒಂದು ಸೀನ್ ನಲ್ಲಿ ಮಾತ್ರ ನಾನು ಈ ಪೊಲೀಸ್ ಡ್ರೆಸ್ ಹಾಕಿದ್ದೇನೆ’ ಅಂತ ಬರೆದುಕೊಂಡಿದ್ದಾರೆ. ರಾಧಿಕಾ ಅವರು ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ತುಂಬಾ ಚೆನ್ನಾಗಿದೆ, ಕ್ಯೂಟ್ ಆಗಿದೆ, ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಎರಡು ದಿನಗಳ ಹಿಂದೆ ದಸರಾ ಹಬ್ಬದ ಪ್ರಯುಕ್ತ ರಾಧಿಕಾ ಅವರು ಸಲ್ವಾರ್ ಹಾಕಿಕೊಂಡು ಸಂಪ್ರದಾಯಿಕವಾಗಿ ಪತಿ ಯಶ್ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ನಾಡಿನ ಜನತೆಗೆ ಹಬ್ಬದ ಶುಭಾಶಯವನ್ನು ತಿಳಿಸಿದ್ದರು.

ರಾಧಿಕಾ ಅವರು ಮದುವೆಯಾದ ನಂತರ ಸಿನಿಮಾವನ್ನು ಮಾಡಿಲ್ಲ. ಆದರೆ ಇತ್ತೀಚೆಗೆ ರಾಧಿಕಾ ಅವರು, ರಂಗಿತರಂಗ ಸಿನಿಮಾದ ನಟ ನಿರೂಪ್ ಭಂಡಾರಿ ಜೊತೆ ಮೊದಲ ಬಾರಿಗೆ ಅಭಿನಯಿಸುವುದರ ಮೂಲಕ ತಮ್ಮ ಸಿನಿಮಾ ಪ್ರಯಾಣವನ್ನು ಮತ್ತೆ ಆರಂಭಿಸಿದ್ದಾರೆ. ರಾಧಿಕಾ ಮತ್ತು ನಿರೂಪ್ ಭಂಡಾರಿ ಒಟ್ಟಿಗೆ `ಆದಿ ಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *