ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್

By
1 Min Read

ಬೆಂಗಳೂರು: ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಸ್ವತಃ ರಾಧಿಕಾ ಪಂಡಿತ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗುತ್ತೆ. ಮದುವೆ ವಾರ್ಷಿಕೋತ್ಸವ ಒಂದಾದರೆ, ಇನ್ನೊಂದು ಬಹುದೊಡ್ಡ ಸಿನಿಮಾ ಕೆಜಿಎಫ್ ರಿಲೀಸ್ ಆಗುತ್ತದೆ. ಅಷ್ಟೇ ಅಲ್ಲದೆ ಅದೇ ಡಿಸೆಂಬರ್‍ನಲ್ಲಿ ಯಶ್ ಮಗು ಜನ್ಮ ಪಡೆಯಲಿದೆ.

ರಾಧಿಕಾ ಡೆಲಿವರಿ ಡೇಟ್ ಇರೋದು ಡಿಸೆಂಬರ್ ನಲ್ಲಿ ಎನ್ನುವುದನ್ನು ಯಶ್ ಈಗಾಗಲೇ ಹೇಳಿದ್ದಾರೆ. ಆದರೆ ಯಾವ ದಿನ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ ದಿನ. ಇದೇ ದಿನದ ಆಸುಪಾಸು ರಾಧಿಕಾ ಡೆಲಿವರಿ ಡೇಟ್ ಫಿಕ್ಸ್ ಆಗಿದೆ.

ಡಿಸೆಂಬರ್ ಮೊದಲ ವಾರದಲ್ಲೇ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ. ಅಲ್ಲಿಗೆ ರಾಕಿಂಗ್ ದಂಪತಿಗೆ ಡಬಲ್ ಖುಷಿ. ಡಿಸೆಂಬರ್ 9 ರಂದೇ ಮಗು ಜನಿಸಿದರೆ ದಂಪತಿಗೂ ಅವರನ್ನು ಆರಾಧಿಸುವ ಕೋಟಿ ಅಭಿಮಾನಿಗಳ ಖುಷಿಗೂ ಮಿತಿಯೇ ಇರಲ್ಲ.

ರಾಧಿಕಾ ಗರ್ಭಿಣಿ ಅಂತ ಮನೆಯಲ್ಲೇ ಕುಳಿತವರಲ್ಲ. ಬದಲಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಿನಿಮಾದ ಕೆಲಸಗಳಲ್ಲಿ ತೊಡಗಿದ್ದರು. ಯಶ್ ಕೂಡ ತಮ್ಮ ಪತ್ನಿಯನ್ನು ಬೇಬಿ ಮೂನ್‍ಗೂ ಕರೆದುಕೊಂಡು ಹೋಗಿ ಬಂದಿದ್ದರು. ಸದ್ಯ ಈ ಡಿಸೆಂಬರ್ ತಿಂಗಳು ಪೂರ್ತಿ ರಾಕಿಂಗ್ ಜೋಡಿಯದ್ದೇ ಹವಾ ಇರುತ್ತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Exit mobile version