ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಯ ಪ್ರೀತಿಯ ಪುತ್ರಿ ಐರಾ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 3ನೇ ಜನುಮದಿನ ಸಂತಸದಲ್ಲಿರುವ ಐರಾಗೆ ರಾಧಿಕಾ ಪಂಡಿತ್ ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಎಷ್ಟೇ ಬ್ಯುಸಿಯಾಗಿದ್ದರು ಮಕ್ಕಳ ಜೊತೆ ಕಾಲ ಕಳೆಯುವುದನ್ನು ಮಾತ್ರ ಎಂದಿಗೂ ಮಿಸ್ ಮಾಡುವುದಿಲ್ಲ. ಪ್ರವಾಸ, ವಾಕಿಂಗ್, ಡಿನ್ನರ್ ಹೀಗೆ ಆಗಾಗಾ ಮಕ್ಕಳನ್ನು ಔಟಿಂಗ್ ಕರೆದುಕೊಂಡು ಹೋಗುತ್ತಿರುತ್ತಾರೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ
ಸದ್ಯ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್ ಇದೀಗ ಮಕ್ಕಳ ಆರೈಕೆಯಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಐರಾ ಮತ್ತು ಯಥರ್ವ್ ತರ್ಲೆ, ಚೇಷ್ಟೆ ವೀಡಿಯೋ ಹಾಗೂ ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮಗಳೊಂದಿಗಿರುವ ಕ್ಯೂಟ್ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ರಾಧಿಕಾ ಪಂಡಿತ್ ಐರಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರೆ ನಟಿ ಅಮೂಲ್ಯ ಜಗದೀಶ್
View this post on Instagram
ಫೋಟೋದಲ್ಲಿ ರಾಧಿಕಾ ಪಂಡಿತ್ ಮಗಳ ಕೈ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋ ಜೊತೆಗೆ ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಳ್ಳುಯವ ಮೂಲಕ ವಿಶ್ ಮಾಡಿದ್ದಾರೆ.