Connect with us

Cinema

ಯಶ್‍ರನ್ನು ಮದುವೆಯಾಗಿದ್ದೇಕೆ?- ರಾಧಿಕಾ ರಿವೀಲ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾಗಿದ್ದೇಕೆ ಎಂಬುದನ್ನು ರಿವೀಲ್ ಮಾಡಿದ್ದಾರೆ.

ರಾಧಿಕಾ ಪಂಡಿತ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಯಶ್ ಅವರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನಿಮ್ಮ ಆತ್ಮೀಯ ಗೆಳೆಯನೊಂದಿಗೆ ಜೀವನ ಚೆನ್ನಾಗಿ ಇರುತ್ತದೆ ಎಂದು ಎಲ್ಲರು ಹೇಳುತ್ತಾರೆ. ಅದಕ್ಕೆ ನಾನು ಇವರನ್ನು ಮದುವೆಯಾಗಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಜೊತೆ ರಾಧಿಕಾ ಅವರು “ಸ್ನೇಹಿತರ ದಿನಾಚರಣೆಯ ಫೋಟೋ ಬರಲಿದೆ” ಎಂದು ಬರೆದುಕೊಂಡಿದ್ದರು. ಹೀಗೆ ಬರೆದು ಸ್ವಲ್ಪ ಸಮಯದ ನಂತರ ಅವರು ತನ್ನ ಗೆಳತಿಯರ ಜೊತೆ ಆಚರಿಸಿಕೊಂಡ ಸ್ನೇಹಿತರ ದಿನದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು.

ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ರವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.