Sunday, 18th August 2019

ಜೂ.ಸಿಂಡ್ರೆಲಾಳ ಮತ್ತೊಂದು ಫೋಟೋ ರಿವೀಲ್ ಮಾಡಿದ ರಾಧಿಕಾ ಪಂಡಿತ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಮಗಳ ಮತ್ತೊಂದು ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳೊಂದಿಗೆ ಇರುವ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ರಾಧಿಕ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ Have a great weekend everyone ಎಂದು ಬರೆದು ತಾವು ಹಾಗೂ ಯಶ್ ಮಗಳೊಂದಿಗೆ ಇರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿನ ರಾಕಿಂಗ್ ದಂಪತಿಯ ಮಗಳ ನಗುವಿಗೆ ನೆಟ್ಟಿಗರು ಕಳೆದೋಗಿದ್ದಾರೆ. ಈವರೆಗೆ ಈ ಫೋಟೋ 1 ಲಕ್ಷಕ್ಕೂ ಹೆಚ್ಚು ಲೈಕ್ ಪಡೆದಿದ್ದು, ಈ ಮುದ್ದಾದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

View this post on Instagram

Have a great weekend everyone 🤗 #radhikapandit #nimmaRP

A post shared by Radhika Pandit (@iamradhikapandit) on

ಈ ಹಿಂದೆ ಮೇ 7ರಂದು ರಾಧಿಕಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಮಗಳ ಫಸ್ಟ್ ಫೋಟೋ ರಿವಿಲ್ ಮಾಡಿದ್ದರು. “ನಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿದ್ದೇವೆ. ನಾವು ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ಹೆಸರು ಇಡುವವರೆಗೂ ಎಲ್ಲರೂ `ಬೇಬಿವೈಆರ್’ ಎಂದು ಕರೆಯಿರಿ. ನೀವು ಎಲ್ಲರೂ ಸೇರಿ ನನ್ನ ಮಗಳಿಗೆ ಪ್ರೀತಿ ಹಾಗೂ ಆರ್ಶೀವಾದ ನೀಡಿ” ಎಂದು ಬರೆದು ಪೋಸ್ಟ್ ಮಾಡಿದ್ದರು.

ನಟ ಯಶ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಟ್ವಿಟ್ಟರಿನಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದರು. ಅಲ್ಲದೆ, “ನೀವು ಹೇಳಿದ್ದೇ ಸರಿ. ಇವಳು ಬರೋವರ್ಗು ಮಾತ್ರ ನನ್ನ ಹವಾ. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ?. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR  ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದರು.

Leave a Reply

Your email address will not be published. Required fields are marked *