Tuesday, 18th February 2020

ನಿಖಿಲ್‍ಗೆ ಡಿಂಪಲ್ ಕ್ವೀನ್ ಶುಭಾಶಯ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅವರು ಇಂದು 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು ನಟಿ ರಚಿತಾ ರಾಮ್ ಶುಭಕೋರಿದ್ದಾರೆ.

ತಾನು ನಿಖಿಲ್ ಜೊತೆ ನಿಂತಿರುವ ಫೋಟೋವನ್ನು ಅಪ್ಲೋಡ್ ಮಾಡಿ ಹ್ಯಾಪಿ ಬರ್ತ್‍ಡೇ ಟು ಯೂ ನಿಖಿಲ್ ಎಂದು ಬರೆದು ನಾಚಿ ನಕ್ಕಿರುವ ಎಮೋಜಿ ಹಾಕಿದ್ದಾರೆ. ಜೊತೆಗೆ ಗಾಡ್ ಬ್ಲೆಸ್ ಎಂದು ಬರೆದಿದ್ದಾರೆ.

 

View this post on Instagram

 

Happy birthday to my dear friend ☺️ God bless!!✨ @nikhilgowda_jaguar

A post shared by Rachita Ram (@rachita_instaofficial) on

ಮಂಗಳವಾರ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದರು. ದೇವಸ್ಥಾನಕ್ಕೆ ಬಂದು ಶಾರದಾಂಬೆ ಹಾಗೂ ತೋರಣ ಗಣಪತಿ ದರ್ಶನ ಪಡೆದು ಹೊರನಾಡಿಗೆ ಹೋಗಬೇಕು ಎಂದು ಹಿಂದಿರುಗಿದ್ದರು.

ರಚಿತಾ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಎಲ್ಲರಿಗೂ ಸೆಲ್ಫಿಗೆ ಪೋಸ್ ಕೊಟ್ಟ ರಚಿತಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಅಲ್ಲದೆ “ಪರ್ಸನಲ್ ಆಗಿ ಬಂದಿದ್ದೇನೆ. ಸ್ವಾರಿ ಹೊರನಾಡಿಗೆ ಹೋಗಬೇಕು ತಡವಾಗುತ್ತದೆ” ಎಂದು ಹೇಳಿ ತೆರಳಿದ್ದರು.

ಕಳೆದ ವರ್ಷ ಬಿಡುಗಡೆಯಾಗಿದ್ದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದರು.

Leave a Reply

Your email address will not be published. Required fields are marked *