Sunday, 22nd September 2019

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

ಬೆಂಗಳೂರು: ಚಂದನವನದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಆದ್ರೆ ಟೀಸರ್‍ನಲ್ಲಿ ಗುಳಿಕೆನ್ನೆಯ ಮುದ್ದಾದ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ರಚಿತಾ ರಾಮ್ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಟೀಸರ್‍ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಅಂತ ಹೇಳಿದ್ರು.

ಸೀತಾರಾಮ ಕಲ್ಯಾಣದಲ್ಲಿ ಎಲ್ಲ ಭಾಷೆಯ ಕಲಾವಿದರು ಇದ್ದಾರೆ. ಎಲ್ಲರೂ ತಮ್ಮ ಭಾಷೆಯಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರತಿಯೊಂದು ಸೀನ್‍ಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದ್ರೆ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಬಳಿಕ ಚಂದನವನದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯೂಟ್ಯೂಬ್‍ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ನಮ್ಮ ಟೀಸರ್ ಇತ್ತು. ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರತಂಡ ಹಾಗು ನನ್ನ ಪರವಾಗಿ ಎಲ್ಲ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *