ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

Advertisements

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ಕೋಟಿ ಹೃದಯ ಕದ್ದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ. ಬರೋಬ್ಬರಿ 215 ಕೋಟಿ ರೂಪಾಯಿ ಹಣ ವಸೂಲಿ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಆರೋಪಿಯನ್ನಾಗಿ ಇಡಿ ಅಧಿಕಾರಿಗಳು ಇಂದು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಗೂ ಮತ್ತು ಜಾಕ್ವೆಲಿನ್ ಇಬ್ಬರೂ ಸ್ನೇಹಿತರು ಎಂದು ಹೇಳಲಾಗುತ್ತಿದ್ದು, ಈ ಸುಖೇಶ್ ಬರೋಬ್ಬರಿ 215 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿರುವ ಖೈದಿಯೊಬ್ಬರನ್ನು ಬಿಡುಗಡೆ ಮಾಡಿಸಲು ಈ ಪ್ರಮಾಣದ ಹಣವನ್ನು ಉದ್ಯಮಿಯ ಪತ್ನಿಗೆ ಕೇಳಿದ್ದರು. ನಂಬಿಸಿ ವಸೂಲಿ ಕೂಡ ಮಾಡಿದ್ದರು. ಆನಂತರ ಉದ್ಯಮಿ ಪತ್ನಿಗೆ ಇದು ಮೋಸ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

Advertisements

215 ಕೋಟಿ ಹಣದಲ್ಲಿ ಸುಖೇಶ್, ಬಾಲಿವುಡ್ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ಡೈಮೆಂಡ್, ವಾಚ್, ಬ್ಯಾಗ್ ಗಳು ಮತ್ತು ದುಬಾರಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿತ್ತು. ಇದೀಗ ಅದು ನಿಜವಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಾಗುತ್ತಿದೆ. ಹಾಗಾಗಿ ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ಜಾಕ್ವೆಲಿನ್ ಹೆಸರೂ ಸೇರಿಸಿದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಖೇಶ್ ಮಾಡಿದ ತಪ್ಪಿಗೆ ಇದೀಗ ಈ ನಟಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

Live Tv

Advertisements
Exit mobile version