Connect with us

Cricket

ಟಿಕ್‍ಟಾಕ್ ಬ್ಯಾನ್- ಈಗ ವಾರ್ನರ್ ಏನು ಮಾಡ್ತಾರೆ?: ಆರ್ ಅಶ್ವಿನ್

Published

on

ಮುಂಬೈ: ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ ಆಗಿದ್ದೆ ತಡ ಆಸ್ಟ್ರೇಲಿಯಾ ಅನುಭವಿ ಆಟಗಾರ ಡೇವಿಡ್ ವಾರ್ನರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‍ಗಳು ವೈರಲ್ ಆಗುತ್ತಿವೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಆರ್.ಅಶ್ವಿನ್ ಕೂಡ ಮುಂದೇ ವಾರ್ನರ್ ಏನು ಮಾಡ್ತಾರೆ ಎಂದು ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ.

ಚೀನಾ ಗಡಿ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೇಶದ ಭದ್ರತೆ ಕಾರಣ ನೀಡಿ ಭಾರತ ಚೀನಾ ಮೂಲದ 59 ಆ್ಯಪ್‍ಗಳ ಮೇಲೆ ನಿಷೇಧ ಹೇರಿದೆ. ಭಾರತದಲ್ಲಿ ಅಂದಾಜು 10 ಕೋಟಿಗೂ ಹೆಚ್ಚು ಬಳಕೆದಾರರು ಹೊಂದಿದ್ದ ಟಿಕ್‍ಟಾಕ್ ಕೂಡ ಬ್ಯಾನ್ ಆಗಿದೆ.

ಕೊರೊನಾ ಕಾರಣದಿಂದ ಕಳೆದ ಮಾರ್ಚ್ ತಿಂಗಳಿನಿಂದ ಕ್ರಿಕೆಟ್ ಚಟುವಟಿಕೆಗಳು ಬಂದ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದ ವಾರ್ನರ್ ಟಿಕ್‍ಟಾಕ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದರು. ಅದರಲ್ಲೂ ವಾರ್ನರ್ ಕನ್ನಡ, ತೆಲುಗು ಹಾಡುಗಳಿಗೆ ಟಿಕ್‍ಟಾಕ್ ಮಾಡುವ ಮೂಲಕ ಹೆಚ್ಚು ಹಿಂಬಾಲಕರನ್ನು ಪಡೆದಿದ್ದರು.

ಇತ್ತ ವಾರ್ನರ್ ಟಿಕ್‍ಟಾಕ್ ವಿಡಿಯೋಗಳ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಆಸೀಸ್ ಮತ್ತೊಬ್ಬ ಆಟಗಾರ ಆರೋನ್ ಫಿಂಚ್ ಕೂಡ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಸದ್ಯ ಟಿಕ್‍ಟಾಕ್ ಬ್ಯಾನ್ ಆಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಆರ್. ಅಶ್ವಿನ್, ವಾರ್ನರ್ ಅವರನ್ನು ಟ್ರೋಲ್ ಮಾಡಿದ್ದಾರೆ.