Connect with us

ವರ್ಷದ ರಜೆಗೆ ಬಂದಿದ್ದ ಸೈನಿಕ ತೋಟದ ಮನೆಯಲ್ಲಿ ಕ್ವಾರಂಟೈನ್

ವರ್ಷದ ರಜೆಗೆ ಬಂದಿದ್ದ ಸೈನಿಕ ತೋಟದ ಮನೆಯಲ್ಲಿ ಕ್ವಾರಂಟೈನ್

ಹಾವೇರಿ: ರಾಜ್ಯದಲ್ಲಿ ಕೊರೊನಾ ಅರ್ಭಟ ಮುಂದುವರಿದಿದೆ. ವರ್ಷದ ರಜೆಗೆ ಬಂದಿದ್ದ ಸೈನಿಕ ಮನೆಗೆ ಹೋಗದೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ತೋಟದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಇರುವ ಶಶಿಧರ ಎಲಿಗಾರ ಎಂಬುವರ ತೋಟದ ಮನೆಯಲ್ಲಿ ಸೈನಿಕ ಮಾಲತೇಶ ಕ್ವಾರಂಟೈನ್ ಆಗಿದ್ದಾರೆ. ನವದೆಹಲಿಯಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲತೇಶ ತಿಪ್ಪಕ್ಕನವರ ಮನೆಗೆ ತೆರಳದೆ ನೇರವಾಗಿ ತೋಟದ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿ ಸೈನಿಕ ಮಾಲತೇಶ ಇತರರಿಗೆ ಮಾದರಿಯಾಗಿದ್ದಾರೆ.

ಕಳೆದ ಎಂಟು ದಿನಗಳಿಂದ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು, ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಮನೆಯ ಸದಸ್ಯರು ಹಾಗೂ ಗ್ರಾಮಸ್ಥರಿಂದ ದೂರವಿದ್ದು ಕ್ವಾರಂಟೈನ್ ಅವಧಿ ಮುಗಿಸುತ್ತಿದ್ದಾರೆ. ಎಲ್ಲರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿ ಕೊರೊನಾ ದಿಂದ ನಾವು ದೂರ ಇರೋಣ ಎನ್ನುವ ಸಂದೇಶವನ್ನ ಸೈನಿಕ ಮಾಲತೇಶ ನೀಡಿದ್ದಾರೆ.

Advertisement
Advertisement