Connect with us

Corona

ಮನೆಯಲ್ಲೇ ಪತಿ ಕ್ವಾರಂಟೈನ್- ರೂಮ್ ಲಾಕ್ ಮಾಡಿ ಪ್ರಿಯಕರನ ಜೊತೆ ಪತ್ನಿ ಎಸ್ಕೇಪ್

Published

on

– ಮೂರು ಮಕ್ಕಳ ತಾಯಿಗಾಗಿ ಪೊಲೀಸರು ಹುಡುಕಾಟ

ಭೋಪಾಲ್: ವಲಸೆ ಕಾರ್ಮಿಕನೊಬ್ಬ ಕ್ವಾರಂಟೈನ್‍ನಲ್ಲಿದ್ದಾಗಲೇ ಪತ್ನಿ ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಇದೀಗ ವಲಸೆ ಕಾರ್ಮಿಕ ತನ್ನ ಪತ್ನಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ನಾಪತ್ತೆ ದೂರನ್ನು ದಾಖಲಿಸಿಕೊಂಡು ಮೂರು ಮಕ್ಕಳ ತಾಯಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

50 ವರ್ಷದ ವ್ಯಕ್ತಿ ದೆಹಲಿಯ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದಯೇ ಪತ್ನಿ ಮತ್ತು ಮಕ್ಕಳು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಮುಂದೇರಿ ಗ್ರಾಮಕ್ಕೆ ವಾಪಸ್ಸಾಗಿದ್ದರು. ಇದೀಗ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ವ್ಯಕ್ತಿ ಮೇ 19ರಂದು ಶ್ರಮಿಕ ರೈಲಿನ ಮೂಲಕ ತನ್ನ ಸ್ವಗ್ರಾಮಕ್ಕೆ ಬಂದಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ವ್ಯಕ್ತಿ 14 ದಿನಗಳವರೆಗೆ ಕ್ವಾರಂಟೈನ್‍ನಲ್ಲಿದ್ದರು. ಆದರೆ ಪತಿ ಕ್ವಾರಂಟೈನ್‍ನಲ್ಲಿದ್ದಾಗಲೇ ಪತ್ನಿ ನಾಪತ್ತೆಯಾಗಿದ್ದಾಳೆ. ಅಂದಿನಿಂದ ಪತ್ನಿಗಾಗಿ ವ್ಯಕ್ತಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಪತ್ನಿ ಎಲ್ಲಿಯೂ ಸಿಗದ ಕಾರಣ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನಲ್ಲಿ ಏನಿದೆ.
ನಾನು ನನ್ನ ಮನೆಯ ಮೊದಲ ಮಹಡಿಯಲ್ಲಿ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಪತ್ನಿ ಹಾಗೂ ಮಕ್ಕಳು ಅದೇ ಮನೆಯ ಗ್ರೌಂಡ್ ಫ್ಲೋರ್‌ನಲ್ಲಿ ನೆಲೆಸಿದ್ದರು. ಮೇ 24 ರಂದು ನಾನು ಬೆಳಗ್ಗೆ ಎದ್ದು ನೋಡಿದರೆ ನನ್ನ ರೂಮಿನ ಬಾಗಿಲು ಲಾಕ್ ಆಗಿತ್ತು. ಹೇಗೋ ಬಾಗಿಲು ಓಪನ್ ಮಾಡಿ ಹೊರಬಂದು ನೋಡಿದೆ. ಆಗ ಪತ್ನಿ ಎಲ್ಲೂ ಕಾಣಲಿಲ್ಲ. ಮಕ್ಕಳು ಮಾತ್ರ ಇದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕ್ವಾರಂಟೈನ್‍ನಲ್ಲಿದ್ದ ಕಾರಣ ವ್ಯಕ್ತಿ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಗ್ರಾಮದ ಮನೆ ಮನೆಯಲ್ಲೂ ಪತ್ನಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ತನ್ನ ಸಂಬಂಧಿಕರ ಬಳಿಯೂ ಕೇಳಿದ್ದಾರೆ. ಆದರೆ ಎಲ್ಲೂ ಪತ್ನಿಯ ಸುಳಿಯೂ ಸಿಕ್ಕಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.