Thursday, 16th August 2018

Recent News

ಹುಡುಗಿಯರನ್ನ ಚುಡಾಯಿಸುತ್ತಿದ್ದ ಬೀದಿ ಕಾಮುಕನಿಗೆ ಬಿತ್ತು ಗೂಸಾ

ಹುಬ್ಬಳ್ಳಿ: ಹುಡುಗಿಯರನ್ನ ಚುಡಾಯಿಸುತ್ತಿದ್ದ ಬೀದಿ ಕಾಮುಕನಿಗೆ ಸ್ಥಳೀಯರೇ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.

ಆಟೋ ಚಾಲಕ ರಮೇಶ್ ಶಿಗ್ಲಿ ಧರ್ಮದೇಟಿಗೆ ಗುರಿಯಾದ ಪಾಗಲ್ ಪ್ರೇಮಿ. ಕೆಲವು ದಿನಗಳಿಂದ ರಮೇಶ್, ನೇಕಾರ ನಗರದ ಸೇತುವೆ ಬಳಿ ನಿಂತು ಯುವತಿಯರನ್ನು ಚುಡಾಯಿಸುತ್ತಿದ್ದ. ಅಲ್ಲದೇ ಸಿಳ್ಳೆ, ಚಪ್ಪಾಳೆ ಹೊಡೆದು ಹುಡುಗಿಯರನ್ನು ರೇಗಿಸುತ್ತಿದ್ದನು.

ರಮೇಶ್ ವರ್ತನೆಯಿಂದ ಸ್ಥಳೀಯ ನಿವಾಸಿಗಳು ಬೇಸತ್ತಿದ್ದರು. ಶುಕ್ರವಾರ ಸಂಜೆ ಯುವತಿಯೊಬ್ಬಳನ್ನು ಚುಡಾಯಿಸುತ್ತಿದ್ದಾಗ ಸಿಲುಕಿಕೊಂಡ ರಮೇಶಗೆ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ. ರಮೇಶ್ ಬೇಡಿಕೊಂಡರು ಬಿಡದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *