Tuesday, 21st May 2019

Recent News

ಕೃಷ್ಣ ಮಠಕ್ಕೆ ಚಿನ್ನದ ಹೊದಿಕೆ – ಚಿನ್ನದ ತಗಡು ತಯಾರಿ ಯಂತ್ರಕ್ಕೆ ಪುನೀತ್ ರಾಜ್‍ಕುಮಾರ್ ಚಾಲನೆ

ಉಡುಪಿ: ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ, ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ, ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.

ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಿಸಲಾಗುತ್ತಿದ್ದು, ಚಿನ್ನದ ತಗಡನ್ನು ಮಾಡಲು ರಾಜಕೋಟ್ ನಿಂದ ತರಿಸಿದ ನೂತನ ರೋಲಿಂಗ್ ಯಂತ್ರಕ್ಕೆ ಸ್ವಿಚ್ ಹಾಕುವುದರೊಂದಿಗೆ ಪುನೀತ್ ರಾಜ್‍ಕುಮಾರ್ ಚಾಲನೆ ನೀಡಿದರು. ಹಾಗೆಯೇ ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ಪರ್ಯಾಯ ಪಲಿಮಾರು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸುವರ್ಣ ಗೋಪುರದ ಮಾದರಿಯನ್ನು ಉದ್ಘಾಟಿಸಿದರು. ಇದನ್ನೂ ಓದಿ: ದೇಶಕ್ಕೆ ಏನೂ ಮಾಡೋದಕ್ಕಾಗುತ್ತಿಲ್ಲ- ಪವರ್ ಸ್ಟಾರ್ ಕೊರಗು

ಮುಂಬೈನ ಉದ್ಯಮಿ ಆದರ್ಶ ಶೆಟ್ಟಿ, ನಟರ ಆಪ್ತ ಕಾರ್ಯದರ್ಶಿ ನೀಲಕಂಠ ವೀರಾಸ್ವಾಮಿ, ಪರ್ಯಾಯ ಮಠದ ಮ್ಯಾನೇಜರ್ ವೆಂಕಟರಮಣ ಆಚಾರ್ಯ, ಪಿಆರ್‍ಓ ಶ್ರೀಶ ಭಟ್ ಕಡೆಕಾರ್, ಸುವರ್ಣ ಗೋಪುರದ ಕೆಲಸದ ಉಸ್ತುವಾರಿಗಳಾದ ಸಚ್ಚಿದಾನಂದ ರಾವ್, ವೆಂಕಟೇಶ್ ಶೇಟ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೆ ಚಿನ್ನದ ಲೇಪನ ಬಗ್ಗೆ ನಟ ಪುನೀತ್ ಮಾಹಿತಿ ಪಡೆದು ಬಳಿಕ ದೇಗುಲದ ಹುಂಡಿಗೆ ಚಿನ್ನದ ಕಾಣಿಕೆಯನ್ನು ಅರ್ಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *