Connect with us

Bengaluru City

ಕೊರೊನಾ ಲಸಿಕೆ ಪಡೆದ ಪುನೀತ್ ರಾಜ್‍ಕುಮಾರ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾ ಲಸಿಕೆ ಪಡೆದಿದ್ದಾರೆ.

ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ಕೊರೊನಾ ಪ್ರಕರಣಗಳಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಪುನೀತ್ ರಾಜ್‍ಕುಮಾರ್ ಅವರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಮೊದಲ ಡೋಸ್ ವ್ಯಾಕ್ಸಿನೇಷನ್ ಇಂದು ಪಡೆದುಕೊಂಡಿದ್ದೇನೆ. ನೀವು 45 ವರ್ಷ ಹಾಗೂ ಮೇಲ್ಪಟ್ಟವರಾದರೆ ವ್ಯಾಕ್ಸಿನ್ ತೆಗೆದುಕೊಳ್ಳುದು ಮರೆಯಬೇಡಿ ಎಂದು ಬರೆದುಕೊಂಡು ಲಸಿಕೆ ಪಡೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ನಟ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಸಮೇತವಾಗಿ ಆಸ್ಪತ್ರೆಗೆ ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿ ಕಳಕಳಿ ಮೂಡಿಸಿದ್ದಾರೆ. ನಟರಾಗಿರುವ ಕಾರಣ ಸಾಮಾಜಿಕವಾಗಿ ಜಾಸ್ತಿ ಬೆರೆಯಬೇಕಾಗುತ್ತದೆ. ಈ ಕಾರಣ ಅಪ್ಪು ಮುಂಜಾಗ್ರತೆಯಿಂದ ಎಚ್ಚೆತ್ತುಕೊಂಡು ಕೂಡಲೇ ವ್ಯಾಕ್ಸಿನ್ ಪಡೆದಿದ್ದಾರೆ.

Click to comment

Leave a Reply

Your email address will not be published. Required fields are marked *