Connect with us

Corona

73 ದಿನಗಳಲ್ಲಿ ಜನರ ಕೈಗೆ ಕೊರೊನಾ ಲಸಿಕೆ?

Published

on

-58 ದಿನಗಳಲ್ಲಿ ವ್ಯಾಕ್ಸಿನ್ ಪರೀಕ್ಷೆ ಪೂರ್ಣ

ನವದೆಹಲಿ: ಕೊರೊನಾದಿಂದ ತತ್ತರಿಸಿದ ಭಾರತಕ್ಕೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. 73 ದಿನದಲ್ಲಿ ಮಹಾಮಾರಿ ಕೋವಿಡ್ ಗೆ ಮದ್ದು ಸಿಗಲಿದೆ ಅಂತಾ ಭಾರತದ ಸಂಸ್ಥೆಯೊಂದು ಹೇಳಿಕೊಂಡಿದೆ. ಮಹಾಮರಿ ಕೊರೊನಾ ಆರ್ಭಟಕ್ಕೆ ಭಾರತ ತತ್ತರಿಸಿದೆ.

ವಿಶ್ವದ ಅತಿ ಹೆಚ್ಚು ಕೊರೊನಾ ಸೋಂಕಿತರು ಹೊಂದಿರುವ ಮೂರನೇ ದೇಶ ಅನ್ನೋ ಕುಖ್ಯಾತಿಗೂ ಒಳಗಾಗಿದೆ. ಏಳು ತಿಂಗಳು ಇನ್ನು ಬೆಂಬಡಿದ ಈ ಹೆಮ್ಮಾರಿಗೆ ಗುಡ್ ಬೈ ಹೇಳುವ ಸಮಯ ಸನ್ನಿಹಿತವಾಗುತ್ತಿದೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅನ್ನೊ ಸಂಸ್ಥೆ ಇನ್ನು 73 ದಿನಗಳಲ್ಲಿ ಲಸಿಕೆ ಮಾರಾಟಕ್ಕೆ ಮುಕ್ತ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಭಾರತದಲ್ಲಿ ಬ್ರಿಟನ್ ವ್ಯಾಕ್ಸಿನ್ ಪರೀಕ್ಷೆ: ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬ್ರಿಟನ್ ನಲ್ಲಿರುವ ಆಕ್ಸ್ ಫರ್ಡ್ ಯೂನಿವರ್ಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಜೇನಿಕಾ ಎಂಬ ಸಂಸ್ಥೆ ಅಭಿವೃದ್ಧಿ ಪಡಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅನುಮತಿ ಪಡೆದುಕೊಂಡಿದ್ದಾರೆ.

ಇದರ ಭಾಗವಾಗಿ ಭಾರತದಲ್ಲೂ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಕೋವಿಶೀಲ್ಡ್ ಹೆಸರಿನ ಕೊರೊನಾ ನಿಗ್ರಹ ಸಲಿಕೆ ಭಾರತದಲ್ಲಿ ನಿನ್ನೆಯಿಂದ ಪ್ರಯೋಗಕ್ಕೆ ಒಳಪಟ್ಟಿದೆ. ಅಹಮದಾಬಾದ್, ಮುಂಬೈ ಮತ್ತು ಪುಣೆಯಲ್ಲಿ ಆರಂಭದಲ್ಲಿ 1,600 ಅಧಿಕ ಮಂದಿಯ ಮೇಲೆ ಪ್ರಯೋಗ ನಡೆಯಲಿದ್ದು ಮೂರನೇ ಹಂತದ ಪ್ರಯೋಗಗಳನ್ನು ಜೊತೆಯಾಗಿ ಮಾಡಲಿದೆ.

ಈ ಸಲಿಕೆಯ ಪ್ರಯೋಗಗಳನ್ನು ಭಾರತದಲ್ಲಿ 58 ದಿನಗಳಲ್ಲಿ ಮುಗಿಸಲಿದ್ದು 73 ದಿನಗಳಲ್ಲಿ ಅಂದ್ರೆ ಅಕ್ಟೋಬರ್ ಅಂತ್ಯಕ್ಕೆ ಜನರ ಕೈಗೆ ಸಿಗುವಂತೆ ವಾಣಿಜ್ಯೀಕರಣ ಮಾಡಲಾಗುವುದು ಎಂದು ಸೀರಮ್ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಯೂ ಈ ಲಸಿಕೆಯ ಪ್ರಯೋಗಳ ಮೇಲೆ ನಿಗಾ ಇಟ್ಟಿದ್ದು ಶೀಘ್ರ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿದೆ.

Click to comment

Leave a Reply

Your email address will not be published. Required fields are marked *