Connect with us

Latest

ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನ – ಸಿಎಂ ರಾಜೀನಾಮೆ

Published

on

ಪುದುಚೇರಿ: ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಸಿಎಂ ವಿ.ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ಸರ್ಕಾರ ವಿಫಲವಾಯ್ತು. ಕಾಂಗ್ರೆಸ್‍ನ 9 ಶಾಸಕರು, ಡಿಎಂಕೆಯ ಮೂವರು ಮತ್ತು ಪಕ್ಷೇತರ ಓರ್ವ ಶಾಸಕ ಸೇರಿದಂತೆ ಸರ್ಕಾರದ ಪರವಾಗಿದ್ದರು. ರಾತ್ರಿ ಡಿಎಂಕೆಯ ಓರ್ವ ಶಾಸಕ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್‍ಗೆ ಕೇವಲ 12 ಶಾಸಕರ ಬೆಂಬಲ ಸಿಕ್ಕಿತ್ತು. ಆದ್ರೆ ಬಹುಮತಕ್ಕೆ 14 ಮತಗಳು ಬೇಕಿತ್ತು.

33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಓರ್ವ ಶಾಸಕರನ್ನ ಕಾಂಗ್ರೆಸ್ ಉಚ್ಛಾಟಿತಗೊಳಿಸಿದ್ರೆ, ಐವರು ಶಾಸಕರು ರಾಜೀನಾಮೆ ನೀಡಿದ್ದಾರೆ.

ಡಿಎಂಕೆಯ ಮೂವರು ಶಾಸಕರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದರು. ಆದ್ರೆ ಭಾನುವಾರದ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಡಿಎಂಕೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೈ ನಾಯಕರಿಗೆ ಶಾಕ್ ನೀಡಿದರು. ಭಾನುವಾರದ ವೇಳೆ ಕಾಂಗ್ರೆಸ್ ಬಳಿ ಕೇವಲ 12 ಶಾಸಕರ ಸಮರ್ಥನೆ ಇತ್ತು. ಆರು ಶಾಸಕರ ರಾಜೀನಾಮೆ ಮತ್ತು ಒಬ್ಬರ ಅನರ್ಹತೆ ಹಿನ್ನೆಲೆ ಪುದುಚೇರಿಯ ವಿಧಾನಸಭಾ ಸದಸ್ಯರ ಸಂಖ್ಯೆ 26ಕ್ಕೆ ತಲುಪಿತ್ತು.

2016ರ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ವಿಪಕ್ಷ ಆಲ್ ಇಂಡಿಯಾ ಎನ್.ಆರ್.ಕಾಂಗ್ರೆಸ್ ಓರ್ವ ಶಾಸಕ ಅನರ್ಹಗೊಂಡಿದ್ದರು. ಈ ಕ್ಷೇತ್ರದ ಉಪ ಚುನಾವಣೆಯನ್ನ ಡಿಎಂಕೆ ಗೆದ್ದು ಕೊಂಡಿತ್ತು.

Click to comment

Leave a Reply

Your email address will not be published. Required fields are marked *